×
Ad

ದುಬೈಯಲ್ಲಿ ನಾಪತ್ತೆಯಾಗಿದ್ದ ಭಾರತದ ಯುವಕನ ಮೃತದೇಹ ಪತ್ತೆ

Update: 2016-09-13 12:03 IST

ದುಬೈ,ಸೆಪ್ಟಂಬರ್ 13: ಕೆಲವಾರುದಿವಸಗಳ ಹಿಂದೆ ದುಬೈಯಿಂದ ಕಾಣೆಯಾಗಿದ್ದ ಕೇರಳದ ಯುವಕನ ಮೃತದೇಹ ಪತ್ತೆಯಾಗಿದೆ. ಇಡುಕ್ಕಿ ನೆಡುಂಕುಂಡಂ ಎಂಬಲ್ಲಿನ ಮೈಕಲ್(36) ಅಲ್‌ಖೂಸ್‌ನ ನಿರ್ಜನ ಸ್ಥಳದಲ್ಲಿ ಮೃತನಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ನಂತರ ಪೊಲೀಸರು ಮೃತದೇಹವನ್ನು ಶವಾಗಾರಕ್ಕೆ ತಂದಿರಿಸಿದ್ದರು ಎಂದು ವರದಿಯೊಂದು ತಿಳಿಸಿದೆ.

 ಸಂದರ್ಶಕ ವೀಸಾದಲ್ಲಿ ಕೆಲಸ ಹುಡುಕಿ ಸಂತೋಷ್ ಸೆಪ್ಟಂಬರ್ ಮೂರಕ್ಕೆ ದುಬೈ ತಲುಪಿದ್ದರು. ಅಲ್‌ಖೂಸ್ ಮಾಲ್ ಸಮೀಪ ಕ್ಯಾಟರಿಂಗ್‌ಕಂಪೆನಿಯಲ್ಲಿ ಅಡುಗೆಗಾರನಾಗಿ ಕೆಲಸಕ್ಕೆ ಸೇರಿದ್ದರು. ಸೆಪ್ಟಂಬರ್ ಐದಕ್ಕೆ ರಾತ್ರಿ ಶಿಫ್ಟ್‌ನಲ್ಲಿ ಅವರು ಕೆಲಸ ಮಾಡಿದ್ದರು. ಬೆಳಗ್ಗೆ ಆರುಗಂಟೆಗೆ ಕೆಲಸಮುಗಿಸಿ ವಾಸಸ್ಥಳಕ್ಕೆ ಕಂಪೆನಿಯ ವಾಹನದಲ್ಲಿತೆರಳಬೇಕಿತ್ತು. ಆದರೆ ಅವರು ಅಲ್ಲಿಂದ ಕಾಣೆಯಾಗಿದ್ದರು. ಅವರ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದರು. ಸೆಪ್ಟಂಬರ್ ಏಳಕ್ಕೆ ಕಂಪೆನಿಯ ಸಮೀಪದ ಒಂದು ಸ್ಥಳದಲ್ಲಿ ಅಪರಿಚಿತ ಶವವೊಂದು ಪೊಲೀಸರಿಗೆ ಲಭಿಸಿತ್ತು. ನಂತರ ಪೊಲೀಸರು ಶವಗಾರಕ್ಕೆ ಅದನ್ನು ಸ್ಥಾನಾಂತರಿಸಿದ್ದರು. ಇದು ಕಾಣೆಯಾದ ಸಂತೋಷನ ಪಾರ್ಥಿವಶರೀರವೆಂದು ಸಂಬಂಧಿಕರು ಗುರುತಿಸಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News