ಸೈಮನ್ ಕೊಲಿಸ್ : ಕರ್ತವ್ಯದಲ್ಲಿರುವಾಗ ಹಜ್ ನೆರವೇರಿಸಿದ ಪ್ರಪ್ರಥಮ ಬ್ರಿಟಿಷ್ ರಾಯಭಾರಿ
Update: 2016-09-13 20:20 IST
ಮನಾಮ, ಸೆ. 13 : ಕರ್ತವ್ಯದಲ್ಲಿರುವಾಗ ಹಜ್ ನೆರವೇರಿಸಿದ ಪ್ರಪ್ರಥಮ ಬ್ರಿಟಿಷ್ ರಾಯಭಾರಿ ಎಂಬ ದಾಖಲೆಗೆ ಸೈಮನ್ ಕೊಲಿಸ್ ಪಾತ್ರರಾಗಿದ್ದಾರೆ.
ಇಹ್ರಾಮ್ ( ಬಿಳಿ ಹಜ್ ಧಿರಿಸು) ಧರಿಸಿ ಪತ್ನಿ ಹುದಾ ಜೊತೆ ಸೈಮನ್ ನಿಂತಿರುವ ಫೋಟೋವನ್ನು " ಇಸ್ಲಾಂ ಸ್ವೀಕರಿಸಿದ ಬಳಿಕ ಹಜ್ ನೆರವೇರಿಸಿದ ಪ್ರಪ್ರಥಮ ಬ್ರಿಟಿಷ್ ರಾಯಭಾರಿ ಸೈಮನ್ ಕೊಲಿಸ್ ಹಾಗು ಅವರ ಪತ್ನಿ ಹುದಾ" ಎಂಬ ವಾಕ್ಯದ ಜೊತೆ ಲೇಖಕಿ ಹಾಗು ಸಾಮಾಜಿಕ ಕಾರ್ಯಕರ್ತ ಫ್ಯಾಉಝಿಯ ಅಲ್ ಬಕ್ರ್ ಅವರು ಟ್ವೀಟ್ ಮಾಡಿ ದ್ದಾರೆ. ಇದನ್ನು ರಾಯಭಾರಿ ಸೈಮನ್ ಖಚಿತಪಡಿಸಿದ್ದಾರೆ.
1978 ರಲ್ಲಿ ಬ್ರಿಟಿಷ್ ವಿದೇಶಾಂಗ ಇಲಾಖೆ ಸೇರಿದ ಸೈಮನ್ ಅರಾಬಿಕ್ ಭಾಷೆ ಕಲಿತಿದ್ದು ಹೆಚ್ಚಾಗಿ ಮಧ್ಯ ಪ್ರಾಚ್ಯ ಹಾಗು ದಕ್ಷಿಣ ಏಷ್ಯಾ ದಲ್ಲೇ ಸೇವೆ ಸಲ್ಲಿಸಿದ್ದಾರೆ. 2015 ರಲ್ಲಿ ಅವರು ಸೌದಿ ರಾಯಭಾರಿಯಾಗಿ ನೇಮಕವಾಗಿದ್ದರು.