ದುಬೈ: ದಾರುನ್ನೂರ್ ಯೂತ್ ಟೀಂ ವತಿಯಿಂದ ಈದ್ ಟೂರ್
ದುಬೈ, ಸೆ.14: ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ನ ಮೂಡುಬಿದಿರೆಯ ಯುಎಇ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ದಾರುನ್ನೂರ್ ಯೂತ್ ಟೀಮ್ ಇದರ ವತಿಯಿಂದ ಬಕ್ರೀದ್ ಹಬ್ಬದಂದು ಫುಜೈರಾ, ಕಲ್ಬಾ , ಕುರ್ಫಖಾನ್ , ಬಿದಿಯಾ ಮಸ್ಜಿದ್, ದಿಬ್ಬ ಮೊದಲಾದ ಕಡೆಗೆ ಪ್ರವಾಸವನ್ನು ಕೈಗೊಳ್ಳಲಾಗಿತ್ತು.
ಅಪರಾಹ್ನ 2:30ಕ್ಕೆ ದೇರಾ ದುಬೈಯಲ್ಲಿರುವ ಈದ್ಗಾ ಬಳಿಯಿಂದ ಪ್ರವಾಸ ಆರಂಭಗೊಂಡಿತು. ಫುಜೈರಾದಲ್ಲಿರುವ ಶೈಖ್ ಝಾಯೆದ್ ಗ್ರಾಂಡ್ ಮಸೀದಿ, ಕಲ್ಬ ಸಮುದ್ರ ಕಿನಾರೆಯಲ್ಲಿರುವ ಉದ್ಯಾನವನಕ್ಕೆ ಭೇಟಿ ನೀಡಲಾಯಿತು. ಪ್ರವಾಸಿಗರನ್ನು ಎರಡು ತಂಡಗಳಾಗಿ ವಿಂಗಡಿಸಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಕೊರ್ಫಕಾನ್ ಬೀಚ್, ಸುಮಾರು 50ವರ್ಷಗಳಷ್ಟು ಹಳೆಯ ಬಿದಿಯಾ ಮಸೀದಿಗೆ ಭೇಟಿ ನೀಡಲಾಯಿತು.
ಶಾಕಿರ್ ಕುಪ್ಪೆಪದವು,ಹನೀಫ್ ಎಡ ಪದವು, ಸಿದ್ದೀಕ್ ಅಗ್ರಹಾರ, ಅಝ್ಮಲ್ ಬಜ್ಪೆ, ಝುಬೈರ್ ತೋಡಾರ್, ರಿಝ್ವೆನ್ ಬಜ್ಪೆಆಹಾರ ತಯಾರಿಯಲ್ಲಿ ಸಹಕರಿಸಿದರು.
ದಾರುನ್ನೂರ್ ಅಲ್ ಐನ್ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಗಡಿಯಾರ್, ಅಝ್ಮಲ್ ಬಜ್ಪೆ, ಶಾಕಿರ್ ಕುಪ್ಪೆಪದವು , ಹನೀಫ್ ಎಡಪದವು, ಶಾಹುಲ್ ಬಿ.ಸಿ.ರೋಡ್ ಹಮೀದ್ ಮನಿಲ, ಸಫಾ ಇಸ್ಮಾಯೀಲ್, ಇಮ್ರಾನ್ ಮಜಿಲೋಡಿ, ಸಂಶೀರ್ ಬಾಂಬಿಲ, ತಾಹೀರ್ ಹೆಂತಾರ್, ಶಾಹುಲ್ ಬಿ.ಸಿ ರೋಡ್, ಸುಹೈಲ್ ಚೊಕ್ಕಬೆಟ್ಟು ಮತ್ತಿತರರು ಪ್ರವಾಸಕ್ಕೆ ಸಹಕರಿಸಿದರು.
ರಾಷ್ಟ್ರೀಯ ಸಮಿತಿ ಪ್ರಮುಖರಾದ ಸಮೀರ್ ಇಬ್ರಾಹಿಂ ಕಲ್ಲರೆ, ಮುಹಮ್ಮದ್ ರಫೀಕ್ ಸುರತ್ಕಲ್, ನಾಸಿರ್ ಸುರತ್ಕಲ್, ರಿಯಾಝ್ ಪಟ್ಟಾಡಿ ಮತ್ತಿತರರು ಉಸ್ತುವಾರಿ ವಹಿಸಿದ್ದರು. ದಾರುನ್ನೂರ್ ಪರಿಚಯ ಮತ್ತು ಧನ್ಯವಾದವನ್ನು ಬದ್ರುದ್ದೀನ್ ಹೆಂತಾರ್ ಸ್ವಾಗತಿಸಿ, ದಾರುನ್ನೂರ್‌ನ ಕಾರ್ಯಚಟುವಟಿಕೆಯನ್ನು ವಿವರಿಸಿ, ವಂದಿಸಿದರು.
ವರದಿ :ಬದ್ರುದ್ದೀನ್ ಹೆಂತಾರ್