ಬಹರೈನ್: ಕೆಸಿಎಫ್‌ನಿಂದ ಈದ್ ಫೆಸ್ಟ್-2016
ಬಹರೈನ್, ಸೆ.17: ಬಕ್ರೀದ್ ಹಬ್ಬದ ಪ್ರಯುಕ್ತ ಅನಿವಾಸಿ ಕನ್ನಡಿಗರ ಸಂಘಟನೆ ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ವತಿಯಿಂದ ಇತ್ತೀಚೆಗೆ ‘ಈದ್ ಫೆಸ್ಟ್-2016’ ಕಾರ್ಯಕ್ರಮ ಇಲ್ಲಿನ ಕಾಲ್ ಟೋನ್ ಹೋಟೆಲ್ನಲ್ಲಿ ಸಂಭ್ರಮದಿಂದ ಜರಗಿತು
ಕಾರ್ಯಕ್ರಮವು ಕೆಸಿಎಫ್ ಬಹರೈನ್‌ನ ಸಂಘಟಕ ಶೌಕತ್ ಅಲಿ ಸಖಾಫಿಯವರ ದುಆ ದೊಂದಿಗೆ ಆರಂಭವಾಯಿತು. ಕೆಸಿಎಫ್ ಅಧ್ಯಕ್ಷ ಫಾರೂಕ್ ಎಸ್.ಎಂ. ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಬಹರೈನ್ ಇಂಡಿಯನ್ ಸ್ಕೂಲ್‌ನ ಸದಸ್ಯ ಜಾಫರ್ ಮಾಹೆ, ಸಿತ್ರ ವಾಟರ್ ಬಾಟಲಿಂಗ್ ಕಂಪೆನಿಯ ನಿರ್ದೇಶಕ ಸಿದ್ದೀಕ್ ಹಾಜಿ, ಈದ್ ಫೆಸ್ಟ್ ಸಮಿತಿಯ ಅಧ್ಯಕ್ಷ ಮನ್ಸೂರ್ ಡಬ್ಲು, ಟಿ.ಸಿ.ಐಎನ್‌ಸಿ ನೇತಾರ ಜಮಾಲ್, ಕೆಸಿಎಫ್ ಲೀಗಲ್ ಕನ್ವೀನರ್ ಅಲಿ ಮುಸ್ಲಿಯಾರ್, ಹನೀಫ್ ಖಾಸಿಮಿ, ಮೊದಲಾದವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಗೆ ಹಾಗೂ ಕೆಸಿಎಫ್ ಕಾರ್ಯಕರ್ತರಿಗೆ ರಸಪ್ರಶ್ನೆ, ಕಿರಾಅತ್ ಪಠಣ, ಭಾಷಣ, ಇಸ್ಲಾಮಿಕ್ ಹಾಡುಗಾರಿಕೆ, ಒಳಾಂಗಣ ಆಟೋಟ ಸ್ಪರ್ಧೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಮಹಿಳೆಯರಿಗೂ ಪ್ರತ್ಯೇಕ ಸ್ಥಳದಲ್ಲಿ ಹಲವು ಸ್ಪರ್ಧೆಗಳನ್ನು ಏರ್ಪಸಲಾಗಿತ್ತು. ರಸಪ್ರಶ್ನೆ ಸ್ಪರ್ಧೆಯಲ್ಲಿ ಮನಾಮ, ರಿಫಾ, ಗುದೈಬಿಯಾ ಹಾಗೂ ಸಲ್ಮಾಬಾದ್ ಸೆಕ್ಟರ್‌ಗಳ ಮಧ್ಯೆ ತೀವ್ರ ಹಣಾಹಣಿ ಏರ್ಪಟ್ಟಿತ್ತು. ಅಂತಿಮವಾಗಿ ಮನಾಮ ಸೆಕ್ಟರ್ ಪ್ರಥಮ , ಸಲ್ಮಾಬಾದ್‌ಸೆಕ್ಟರ್ ದ್ವಿತೀಯ ಸ್ಥಾನ ಗಳಿಸಿದವು. ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಇದೇ ಸಂದರ್ಭ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಆಯೋಜಿಸಲಾಗಿದ್ದ ಅದೃಷ್ಟ ಚೀಟಿಯಲ್ಲಿ ವಿಜೇತ ಓರ್ವರಿಗೆ ಉಚಿತ ಉಮ್ರಾ ಭಾಗ್ಯ ದೊರೆಯಿತು.
ಮಾಸ್ಟರ್ ದರ್ವೀಶ್ ಬಹರೈನ್, ಮಾಸ್ಟರ್ ನಬೀಲ್ ಬೆಂಗಳೂರು ನಆತ್ ಹಾಡಿದರು ಆಟೋಟ ಸ್ಪರ್ಧೆಗಳ ನೇತೃತ್ವ ವಹಿಸಿದ್ದ ಅನ್ಸಾರ್ ಬಜ್ಪೆ, ಬಶೀರ್ ಕಾರ್ಲೆ, ತೌಫೀಕ್ ಬೆಳ್ತಂಗಡಿ, ಕಾರ್ಯಕ್ರಮ ನಿರೂಪಿಸಿದರು. ಕೆಸಿಎಫ್ ಬಹರೈನ್ ಸಂಚಾಲಕ ಅಝೀಝ್ ಸುಳ್ಯ ವಂದಿಸಿದರು