ಸೌದಿಅರೇಬಿಯ: ಹಜ್ ವೇಳೆ 54 ಭಯೋತ್ಪಾದಕರ ಬಂಧನ
ಜಿದ್ದ, ಸೆಪ್ಟಂಬರ್ 19: ಹಜ್‌ಗೆ ಸಂಬಂಧಿಸಿ ನಡೆಸಲಾದ ತಪಾಸಣೆಯಲ್ಲಿ 54 ಭಯೋತ್ಪಾದಕರು ಸಿಕ್ಕಿಬಿದ್ದಿದ್ದಾರೆ.ಇವರಲ್ಲಿ 30 ಮಂದಿ ಸೌದಿ ಅರೇಬಿಯ ಪ್ರಜೆಗಳು ಮತ್ತು 13 ಮಂದಿ ಬಹ್ರೈನ್ ಪ್ರಜೆಗಳು ಇದ್ದಾರೆಂದು ಗೃಹಸಚಿವಾಲಯ ತಿಳಿಸಿದೆ ಎಂದು ವರದಿಯಾಗಿದೆ. ಇವರಲ್ಲಿ ಓರ್ವ ಬ್ರೂನಿಯ ವ್ಯಕ್ತಿಯಾಗಿದ್ದು. ಇದೇ ಮೊದಲ ಬಾರಿಗೆ ಬ್ರೂನಿಯ ವ್ಯಕ್ತಿ ಭಯೋತ್ಪಾದನೆಯ ಹೆಸರಿನಲ್ಲಿ ಸೌದಿಅರೇಬಿಯದಲ್ಲಿ ಬಂಧನಕ್ಕೊಳಗಾಗಿದ್ದಾನೆ. ಅರಫಾದಿನದಂದು ರಿಯಾದ್‌ನಲ್ಲಿ ಈತ ಭದ್ರತಾ ಇಲಾಖೆಯ ಕಣ್ಣಿಗೆ ಬಿದ್ದಿದ್ದನು.
ದುಲ್‌ಹಜ್ ಒಂದಕ್ಕೆ ವಿವಿಧ ಕಡೆಗಳಲ್ಲಿ ಹದಿನೇಳು ಮಂದಿಯನ್ನು ಬಂಧಿಸಲಾಗಿದೆ. ಒಂಬತ್ತು ಬಹ್ರೈನಿಗರು, ಮೂವರು ಪಾಕಿಸ್ತಾನಿಗಳು ಇಬ್ಬರು ಸೌದಿಗಳು ಮತ್ತು ತಲಾಒಬ್ಬೊಬ್ಬ ಯಮನ್ ಮತ್ತು ಸುಡಾನಿನ ವ್ಯಕ್ತಿಇದರಲ್ಲಿ ಸೇರಿದ್ದಾರೆ. ದುಲ್‌ಹಜ್ ಮೂರಕ್ಕೆ ಐದು ಮಂದಿಯನ್ನು ಬಂಧಿಸಲಾಗಿದೆ. ಇಬ್ಬರು ಬಹ್ರೈನಿಗಳು ಇಬ್ಬರು ಸೌದಿ ಪ್ರಜೆಗಳು ಒಬ್ಬ ಯಮನಿ ವ್ಯಕ್ತಿಯನ್ನು ಅಂದು ಬಂಧಿಸಲಾಗಿತ್ತು. ನಾಲ್ಕನೆ ತಾರಿಕಿಗೆ ಹನ್ನೆರಡು ಮಂದಿಯನ್ನು ಬಂಧಿಸಲಾಯಿತು. ಇವರಲ್ಲಿ ಆರು ಮಂದಿ ಸೌದಿ ಪ್ರಜೆಗಳು ಇಬ್ಬರು ಬಹ್ರೈನಿಗಳು ಇಬ್ಬರು ಯಮನಿಯರು ತಲಾ ಒಬ್ಬೊಬ್ಬ ಸಿರಿಯ ಮತ್ತು ಇರಾಕಿ ವ್ಯಕ್ತಿಗಳಿದ್ದರು. ಐದನೆ ತಾರೀಕಿಗೆ ಇಬ್ಬರು ಸೌದಿ ಒಬ್ಬ ಸಿರಿಯನ್ ವ್ಯಕ್ತಿ ಸೆರೆಯಾಗಿದ್ದಾರೆ. ಆರನೆ ತಾರೀಕಿಗೆ ಒಬ್ಬ ಸೌದಿಪ್ರಜೆ. ಏಳುಮತ್ತು ಎಂಟನೆ ತಾರೀಕಿಗೆ ತಲಾ ಐವರು ಸೌದಿಪ್ರಜೆಗಳು ಭಯೋತ್ಪಾದನಾ ಆರೋಪದಲ್ಲಿ ಸೆರೆಯಾಗಿದ್ದಾರೆ. ಒಂಬತ್ತಕ್ಕೆ ಅರಫಾ ದಿನದಲ್ಲಿ ಹತ್ತು ಸೌದಿಗಳು ಒಬ್ಬ ಬ್ರೂನೈ ಸ್ವದೇಶಿಯನ್ನು ಬಂಧಿಸಲಾಯಿತು. ದೇಶದ ವಿವಿಧಭಾಗಗಳಿಂದ ಇವರನ್ನು ಬಂಧಿಸಲಾಗಿದ್ದು. ಲೋಪರಹಿತ ಭದ್ರತಾ ವ್ಯವಸ್ಥೆಯನ್ನು ಈಸಲ ಮಾಡಲಾಗಿತ್ತು.
ಹಜ್ ಆರಂಭವಾಗುವುದಕ್ಕಿಂತ ವಾರಗಳ ಮೊದಲು ಚೆಕ್‌ಪಾಯಿಂಟ್‌ಗಳಲ್ಲಿ ಬಿಗಿ ತಪಾಸಣೆ ನಡೆಸಲಾಗಿತ್ತು. ಅನಧಿಕೃತವಾಗಿ ಹಜ್ ಮಾಡಲು ಬರುವವರನ್ನು ತಡೆಯುವುದು ಮತ್ತು ಭದ್ರತಾ ವ್ಯವಸ್ಥೆಗೆ ಚುರಕುಮುಟ್ಟಿಸುವುದು ಇದರ ಉದ್ದೇಶವಾಗಿತ್ತು ಎಂದು ವರದಿ ತಿಳಿಸಿದೆ.