1.7 ಮಿಲಿಯನ್ ದಿರ್ಹಮ್ ಹಣವಿದ್ದ ಬ್ಯಾಗನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಟ್ಯಾಕ್ಸಿ ಚಾಲಕ !

Update: 2016-09-23 08:39 GMT

ಶಾರ್ಜಾ , ಸೆ. 23 : ತನ್ನ ಟ್ಯಾಕ್ಸಿಯಲ್ಲಿ ಪ್ರಯಾಣಿಕನೊಬ್ಬ ಮರೆತು ಹೋದ  1.7 ಮಿಲಿಯನ್ ದಿರ್ಹಮ್ (3 ಕೋಟಿ ಹತ್ತು ಲಕ್ಷ ರೂ. ) ಹಣವಿದ್ದ ಬ್ಯಾಗನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಟ್ಯಾಕ್ಸಿ ಚಾಲಕನನ್ನು ಶಾರ್ಜಾ ರಸ್ತೆ ಹಾಗು ಸಾರಿಗೆ ಪ್ರಾಧಿಕಾರ (RTA) ಸನ್ಮಾನಿಸಿದೆ. 

ಕೊರಿಯನ್ ಉದ್ಯಮಿಯೊಬ್ಬ ಪಾಕಿಸ್ತಾನಿ ಚಾಲಕ ನಸೀಬುಲ್ಲಾಹ್ ಶೇರ್ ಅವರ  ಟ್ಯಾಕ್ಸಿಯಲ್ಲಿ ಶಾರ್ಜಾ ವಿಮಾನ ನಿಲ್ದಾಣದಿಂದ  ಪ್ರಯಾಣಿಸಿ ಇಳಿಯುವಾಗ ಹಣ ಹಾಗು ದಾಖಲೆಗಳಿದ್ದ ಬ್ಯಾಗ್ ಬಿಟ್ಟು ಹೋಗಿದ್ದರು. 

ಬ್ಯಾಗ್ ನೋಡಿದ ನಸೀಬುಲ್ಲಾಹ್ ಕೂಡಲೇ ಆರ್ ಟಿ ಎ ಟ್ಯಾಕ್ಸಿ ಕಚೇರಿಗೆ ಹೋಗಿ ಅದನ್ನು ಕೊಟ್ಟಿದ್ದಾರೆ. ಅಲ್ಲಿಂದ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಪೊಲೀಸರು ಆ ಕೊರಿಯನ್ ಉದ್ಯಮಿಯನ್ನು ಪತ್ತೆ ಹಚ್ಚಿ ಅವರ ಬ್ಯಾಗನ್ನು ಅವರಿಗೆ ಹಸ್ತಾಂತರಿಸಿಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News