ವಿಮಾನದ ದಾಸ್ತಾನು ಜಾಗದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ !

Update: 2016-09-24 10:17 GMT

ಜಿದ್ದಾ , ಸೆ. 24 : ಇಲ್ಲಿನ ಕಿಂಗ್ ಅಬ್ದುಲ್ ಅಝೀಜ್ಹ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೈಜೀರಿಯದಿಂದ ಬಂದಿಳಿದ ಫ್ಲೈನಾಸ್ ಏರ್ ಲೈನ್ಸ್ ವಿಮಾನದ ಹಿಂದಿನ ದಾಸ್ತಾನು ಜಾಗದಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿದೆ. ವಿಮಾನ ಇನ್ನೊಂದು ಸ್ಥಳಕ್ಕೆ ಹೊರಡುವ ಮೊದಲು ಅದನ್ನು ಪರೀಕ್ಷಿಸುತ್ತಿದ್ದ ವಿಶೇಷ ತಂಡ ಈ ಮೃತದೇಹವನ್ನು ಪತ್ತೆ ಹಚ್ಚಿ ಬಳಿಕ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದರು. 

ವಿಮಾನದ ಈ ಸ್ಥಳದಲ್ಲಿ ಅತ್ಯಂತ ಮಂಜುಗಡ್ಡೆಯಷ್ಟು ತಣ್ಣಗೆ ಹಾಗು ಶೂನ್ಯ ಆಮ್ಲಜನಕ ಇರುವುದರಿಂದ ವಿಮಾನ ಹಾರುತ್ತಿರುವಾಗ ಮನುಷ್ಯ ಜೀವಂತ ಉಳಿಯುವುದು ಸಾಧ್ಯವೇ ಇಲ್ಲ. 

ಇಂತಹ ಸ್ಥಳದಲ್ಲಿ  ಹೀಗೆ ಮನುಷ್ಯರ ಮೃತದೇಹ ಸಿಗುವುದು ಇದೇ ಮೊದಲಲ್ಲ. ಅಕ್ರಮ ವಲಸಿಗರು ಜೀವವನ್ನು ಪಣಕ್ಕಿಟ್ಟು ಈ ರೀತಿ ಅಪಾಯ ಮೈಮೇಲೆ ಎಳೆದುಕೊಳ್ಳುತ್ತಾರೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News