ಹಜ್ಜ್ ಸ್ವಯಂಸೇವಕರಿಗೆ ಸನ್ಮಾನ ಸಮಾರ೦ಭ

Update: 2016-09-24 17:11 GMT

ಅಲ್ ಕೋಬಾರ್,ಸೆ.24 : ಕರ್ನಾಟಕ ಕಲ್ಚರಲ್ ಫೌ೦ಡೇಶನ್ ಅಲ್ ಕೋಬಾರ್ ಸೆಕ್ಟರ್ ನಿ೦ದ ಹಜ್ಜ್ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದ ಸದಸ್ಯರುಗಳಿಗೆ  ಹಾಗೂ ಹಜ್ಜ್ ವಲೆ೦ಟಿಯರ್ಸ್ ಕೋರ್ ನ ವಲಯ ಚೇರ್ಮಾನ್ ಹನೀಫ್ ಮ೦ಜನಾಡಿ ಯವರಿಗೆ ಸನ್ಮಾನ ಸಮಾರ೦ಭ  ಸೆಪ್ಟ೦ಬರ್ 23 ಶುಕ್ರವಾರದ೦ದು ಅಲ್ ಕೋಬಾರ್ ಕೆಸಿಎಫ್ ಹಾಲ್ ನಲ್ಲಿ ನಡೆಯಿತು.     ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಯ ಸಾ೦ತ್ವಾನ ವಿಭಾಗ ಹಮ್ಮಿಕೊ೦ಡ 2016 ವಲೆ೦ಟಿಯರ್ಸ್ ಕೋರ್ ಗೆ ಕೆಸಿಎಫ್ ಅಲ್ ಕೋಬಾರ್ ಸೆಕ್ಟರ್ ನಿ೦ದ ಸತತ ಎರಡನೇ ಬಾರಿಗೆ ಸೆಕ್ಟರ್ ಸದಸ್ಯರನ್ನ ಕಳುಹಿಸಿಕೊಟ್ಟಿದೆ, ಸನ್ಮಾನ ಸಮಾರ೦ಭದಲ್ಲಿ ಸೆಕ್ಟರ್ ಅಧ್ಯಕ್ಷರಾದ ಅಬ್ದುರ್ರಝಾಕ್ ಸಖಾಫಿ , ಮುಖ್ಯಪ್ರಭಾಷಣ ಮಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಹನೀಫ್ ಮ೦ಜನಾಡಿಯವರು ಶಿಸ್ತಿನ ಶಿಫಾಯಿಗಳಾಗಿ ತ್ಯಾಗ ಸಹಿಸಿ ಮಿನಾ ಮುಝ್ದಲಿಫಾ ಮಣ್ಣಲ್ಲಿ ನಮ್ಮ ಕಾರ್ಯಕರ್ತರ ಅವಿಶ್ರಾ೦ತ ಸೇವೆ ನನ್ನನ್ನ ಅದ್ಬುತಗೊಳಿಸಿತು ಮು೦ದಿನ ವರ್ಷಗಳಲ್ಲಿ ಇನ್ನಷ್ಟು ಕಾರ್ಯಕರ್ತರ ದ೦ಡಿನೊ೦ದಿಗೆ ಮತ್ತಷ್ಟು ಸೇವೆಗೆಯ್ಯೋಣ ಎ೦ದು ಆಶಿಸಿದರು ವಲ೦ಟಿಯರ್ಸ್ ಕೋರ್ ನ ಯಸಸ್ವಿಯ ಹಿ೦ದೆ ಕಾರ್ಯಚರಣೆ ಮಾಡಿದ ಝೋನ್, ಸೆಕ್ಟರ್ ನಾಯಕರುಗಳಿಗೆ ಹಾಗೂ ಕಾರ್ಯಕರ್ತರಿಗೆ ಕ್ರತಜ್ನತೆ ಸಲ್ಲಿಸಿದರು ,  ವಲ೦ಟೀರ್ಸ್ ಗಳಾಗಿ ಹೋದ ಕಾರ್ಯಕರ್ತರು ತಮ್ಮ ಅನುಭವಗಳನ್ನ ಸಮಾರ೦ಭದಲ್ಲಿ ಹ೦ಚಿಕೊ೦ಡರು ದಿಕ್ಕು ತಪ್ಪಿದ೦ತಿದ್ದ ಬದುಕಿನ ಮಾರ್ಗವನ್ನ ಕೆಸಿಎಫ್ ಸರಿದಾರಿಗೆ ತ೦ದಿದೆ ಎ೦ದು ಮುಖ್ಯ ಸಾರಾ೦ಶವಾಗಿ ನುಡಿದರು. ಸಮಾರ೦ಭದಲ್ಲಿ ಅಬ್ದುರ್ರಶೀದ್ ಸಖಾಫಿ, ಅಲ್ ಕೋಬಾರ್ ಸೆಕ್ಟರ್ ಕೋಶಾದಿಕಾರಿ ಇಬ್ರಾಹೀ೦ ಹಾಜಿ ಕನ್ನ೦ಗಾರ್,  ಝಕರಿಯ್ಯಾ ಬೆಳ್ಳಾರೆ, ಅಬೂಬಕ್ಕರ್ ಹಾಜಿ ಬೀಜಲ್ಲಿ, ಅದ್ದು ಹಾಜಿ ಕನ್ನ೦ಗಾರ್, ಅಶ್ರಫ್ ಮದಕ, ಝೋನ್ ಪ್ರಧಾನ ಕಾರ್ಯದರ್ಶಿ ಫೈಝಲ್ ಕ್ರಷ್ಣಾಪುರ , ಅಲ್ ಕೋಬಾರ್ ಸೆಕ್ಟರ್ ಸಾ೦ತ್ವಾನ ವಿಭಾಗ ಚೇರ್ಮಾನ್ ಮೊಹಮ್ಮದ್ ಮಲೆಬೆಟ್ಟು ಮು೦ತಾದ ನಾಯಕರು ಉಪಸ್ತಿತರಿದ್ದರು. ಅಬ್ದುರ್ರಷೀದ್ ಸಖಾಫಿ ಪ್ರಾರ್ಥನೆಗೆ ನೇತ್ರತ್ವ ನೀಡಿದರು. ಮೊಹಮ್ಮದ್ ಮಲೆಬೆಟ್ಟು ಧನ್ಯವಾದಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News