ಪೆಟ್ರೋಲ್ ಬಂಕ್‌ನಲ್ಲಿ ವಾಹನಕ್ಕೆ ಬೆಂಕಿ: ಗಾಯಾಳು ಮಗುವಿಗೆ ಮರಳಿದ ಪ್ರಜ್ಞೆ

Update: 2016-09-25 06:22 GMT

ಮಸ್ಕತ್, ಸೆಪ್ಟಂಬರ್ 25: ಸೂರ್ ಬಿಲಾದಿನಲ್ಲಿ ಪೆಟ್ರೋಲ್‌ಬಂಕ್‌ನಲ್ಲಿ ಬೆಂಕಿ ಹಿಡಿದ ವಾಹನದಿಂದ ಸ್ವದೇಶಿಯೊಬ್ಬರು ಸಾಹಸಿಕವಾಗಿ ಹೊರತಂದ ಜೋರ್ಡಾನ್‌ನ ಮಗುವಿಗೆ ಪ್ರಜ್ಞೆ ಮರಳಿದೆ. ಮೂರುವರ್ಷವಯಸ್ಸಿನ ಮಗು ಸುಲೈಮಾನ್ ಮುಹಮ್ಮದ್ ಕಣ್ಣುತೆರೆದು ಮಾತಾಡಿದ್ದಾನೆಂದು ಸಂಬಂಧಿಕರು ತಿಳಿಸಿದ್ದಾರೆ. ಶೇ.30ರಷ್ಟು ಸುಟ್ಟಗಾಯಗಳಾಗಿದ್ದ ಸುಲೈಮಾನ್‌ನ್ನು ಮೊದಲು ಸೂರ್ ಆಸ್ಪತ್ರೆಗೂ ನಂತರ ಖೌಲ ಆಸ್ಪತ್ರೆಗೂ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು. ಕೃತಕ ಉಸಿರಾಟದ ಉಪಕರಣದ ಸಹಾಯವಿಲ್ಲದೆ ಮಗು ಉಸಿರಾಡುತ್ತಿದೆ. ಸ್ವಲ್ಪಪ್ರಮಾಣದಲ್ಲಿ ಆಹಾರವನ್ನೂ ಸೇವಿಸಿದ್ದಾನೆ. ಮೊದಲು ತನ್ನ ಸಹೋದರಿ ಗಝಾಲಿಯನ್ನು ಕುರಿತು ಆತ ಕೇಳಿದ್ದಾನೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಶೇ.70ರಷ್ಟು ಸುಟ್ಟಗಾಯಗಳಾಗಿರುವ ಸಹೋದರಿ ಗಝಾಲಿಗೆ ಈವರೆಗೂ ಪ್ರಜ್ಞೆ ಮರಳಿಲ್ಲ. ಗಝಾಲಿ ಹೊಗೆಯನ್ನು ಉಸಿರಾಡಿದ್ದರಿಂದ ಶ್ವಾಸಕೋಶ ಸುಟ್ಟಗಾಯಗಳಾಗಿವೆ. ಹಲವಾರು ಬಾರಿ ಚರ್ಮಬದಲಾವಣೆ ಚಿಕಿತ್ಸೆಯನ್ನು ನಡೆಸಲಾಗಿದೆ ಎಂದು ತಂದೆ ಮುಹಮ್ಮದ್ ಸುಲೈಮಾನ್ ಹೇಳಿದ್ದಾರೆ. ರಕ್ತದೊತ್ತಡ ಸಾಧಾರಣಗತಿಗೆ ಬಂದಿದ್ದರೂಈವರೆಗೂ ಗಝಾಲಿ ಔಷಧಕ್ಕೆ ಪ್ರತಿಕ್ರಿಯಿಸಲುಆರಂಭಿಸಿಲ್ಲ. ಅವಳ ಕುರಿತು ವೈದ್ಯರು ಯಾವ ಭರವಸೆಯನ್ನೂ ನೀಡುವ ಸ್ಥಿತಿಯಲ್ಲಿಲ್ಲ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News