ಯುವತಿಗೆ ಫೇಸ್‌ಬುಕ್‌ನಲ್ಲಿ ಬೆದರಿಕೆ: ಯುವಕನಿಗೆ ಭಾರೀ ದಂಡ

Update: 2016-09-26 10:01 GMT

ಶಾರ್ಜ, ಸೆಪ್ಟಂಬರ್ 26: ಫೇಸ್‌ಬುಕ್‌ನಲ್ಲಿ ಯುವತಿಯೊಬ್ಬಳ ಫೋಟೊವನ್ನು ಪೋಸ್ಟ್ ಮಾಡುವೆ ಎಂದು ಬೆದರಿಸಿದ ಅರಬ್ ಯುವಕನಿಗೆ ಶಾರ್ಜದ ಕೋರ್ಟು 46ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ ಎಂದು ವರದಿಯಾಗಿದೆ.

ಯುವತಿ ಕೋರ್ಟಿಗೆ ದೂರು ನೀಡಿದ್ದಳು. ಸೋಶಿಯಲ್ ಮೀಡಿಯದ ಮೂಲಕ ಮೂವತ್ತುವರ್ಷದ ಯುವಕನೊಂದಿಗೆ ಆಕೆಗೆ ಪರಿಚಯವಾಗಿತ್ತು.

ನಂತರ ಪರಿಚಯ ವೃದ್ಧಿಯಾಗಿ ಯುವತಿ ತನ್ನ ಖಾಸಗಿ ಫೋಟೊಗಳನ್ನುಯುವಕನಿಗೆ ಕಳುಹಿಸಿಕೊಟ್ಟಿದ್ದಳು. ಈ ಫೋಟೊವನ್ನು ತನ್ನ ಬಳಿ ಇಟ್ಟುಕೊಂಡಿದ್ದ ಯುವಕ ಅದನ್ನು ಫೇಸ್‌ಬುಕ್‌ನಲ್ಲಿ ಹಾಕುವೆ ಎಂದು ಬೆದರಿಸಿ ಆಕೆಯನ್ನು ಬ್ಲಾಕ್‌ಮೇಲ್ ಮಾಡಿದ್ದಾನೆ ಎಂದು ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News