ಮಕ್ಕಾ - ಮದೀನಾ ರೈಲ್ವೆ ಯೋಜನೆಯ ಬಗ್ಗೆ ಮಹತ್ವದ ಘೋಷಣೆ

Update: 2016-09-27 11:46 GMT

ರಿಯಾದ್, ಸೆ. 27: 2017ರ ಕೊನೆಯಲ್ಲಿ ಹರಮೈನ್ ರೈಲ್ವೆ ಯೋಜನೆಯು ಸಂಪೂರ್ಣವಾಗಿ ಕಾರ್ಯಾರಂಭಗೊಳಿಸುವ ಮುನ್ನ, ಜಿದ್ದಾ, ಕಿಂಗ್ ಅಬ್ದುಲ್ಲಾ ನಗರ ಮತ್ತು ಮದೀನಾಗಳಲ್ಲಿ ವಾಣಿಜ್ಯಿಕ ನೆಲೆಯಲ್ಲಿ ನೂತನ ರೈಲು ನಿಲ್ದಾಣಗಳನ್ನು ಆರಂಭಿಸುವ ತನ್ನ ಯೋಜನೆಯನ್ನು ಸೌದಿ ರೈಲ್ವೇಸ್ ಆರ್ಗನೈಸೇಶನ್ (ಎಸ್‌ಆರ್‌ಒ) ಪರಿಷ್ಕರಿಸಿದೆ.
ರೈಲ್ವೆ ಯೋಜನೆಯ ವಾಸ್ತವಿಕ ಅನುಷ್ಠಾನವನ್ನು ಪರಿಷ್ಕರಿಸುವ ಮುನ್ನ, ಈ ರೈಲು ನಿಲ್ದಾಣಗಳು ವಾಣಿಜ್ಯಿಕವಾಗಿ ನಡೆಯುತ್ತವೆಯೇ ಎನ್ನುವುದನ್ನು ಈಗಲೇ ನಿರ್ಧರಿಸಲಾಗದು, ಯಾಕೆಂದರೆ ಅವುಗಳನ್ನು ನಡೆಸಲು ನಿರ್ವಹಣೆ ಮತ್ತು ಶುಚಿತ್ವ ವೆಚ್ಚಗಳ ಅಗತ್ಯವಿದೆ ಎಂದು ಯೋಜನೆಯ ಅಧಿಕಾರಿಯೊಬ್ಬರು ಸ್ಥಳೀಯ ದೈನಿಕವೊಂದಕ್ಕೆ ಹೇಳಿದರು.
‘‘ಈ ರೈಲು ನಿಲ್ದಾಣಗಳನ್ನು ನಡೆಸುವುದು ಯೋಜನಾ ಆಡಳಿತದ ಮೇಲೆ ಆರ್ಥಿಕ ಹೊರೆಯನ್ನು ಉಂಟು ಮಾಡುತ್ತದೆ, ಯಾಕೆಂದರೆ, ಇದರ ಪ್ರಮುಖ ಗ್ರಾಹಕರಾಗಿರುವ ಪ್ರಯಾಣಿಕರು ಇನ್ನೂ ಬಂದಿಲ್ಲ’’ ಎಂದರು.
ಯೋಜನೆಯು ಕಾರ್ಯಗತಗೊಳ್ಳುವ ಮುನ್ನ, ಮದೀನಾ ಮತ್ತು ರಬಿಗ್‌ಗಳಲ್ಲಿರುವ ರೈಲು ನಿಲ್ದಾಣಗಳ ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳನ್ನು ಬಾಡಿಗೆಗೆ ಕೊಡುವುದು ಹಾಗೂ ಅವುಗಳನ್ನು ಸಾರ್ವಜನಿಕರಿಗೆ ತೆರೆಯುವುದು, ಸ್ಪೇನ್‌ನ ಸಂಸ್ಥೆಯೊಂದರ ಜೊತೆ ನಡೆಸಿದ ಒಪ್ಪಂದದ ಉಲ್ಲಂಘನೆಯಾಗುತ್ತದೆ ಅಧಿಕಾರಿ ಹೇಳಿದರು.
ಯೋಜನೆಯು ಸಂಪೂರ್ಣವಾಗಿ ಜಾರಿಗೆ ಬಂದ ಬಳಿಕ, ಮಕ್ಕಾ ಮತ್ತು ಮದೀನಾಗಳ ನಡುವೆ ಪ್ರತಿ ಅರ್ಧ ಗಂಟೆಗೊಮ್ಮೆ ಎರಡೂ ದಿಕ್ಕುಗಳಲ್ಲಿ 35 ಪ್ಯಾಸೆಂಜರ್ ಕಾರುಗಳು ಓಡಾಡಲಿವೆ.
ಮಕ್ಕಾ ಮತ್ತು ಜಿದ್ದಾಗಳ ನಡುವಿನ ಪ್ರಯಾಣ 21 ನಿಮಿಷಗಳನ್ನು ತೆಗೆದುಕೊಂಡರೆ, ಜಿದ್ದಾ-ಕಿಂಗ್ ಅಬ್ದುಲ್ಲಝೀಝ್ ವಿಮಾನ ನಿಲ್ದಾಣಗಳ ನಡುವಿನ ಪ್ರಯಾಣ 14 ನಿಮಿಷಗಳು, ಕಿಂಗ್ ಅಬ್ದುಲ್ಲಝೀಝ್ ವಿಮಾನ ನಿಲ್ದಾಣ-ರಬಿಗ್ ನಡುವಿನ ಯಾನ 36 ನಿಮಿಷಗಳು, ರಬಿಗ್-ಮದೀನಾ ನಡುವಿನ ಯಾನ 61 ನಿಮಿಷಗಳನ್ನು ತೆಗೆದುಕೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News