ಸೌದಿಅರೇಬಿಯ: ಉಮ್ರ ವೀಸಾಕ್ಕೆ ದರ ಹೆಚ್ಚಳ
ದೋಹ, ಸೆಪ್ಟಂಬರ್ 28: ಸೌದಿ ಸರಕಾರ ಹೊಸದಾಗಿ ವೀಸಾ ದರ ಪರಿಷ್ಕರಿಸಿದ್ದು, ಉಮ್ರ ಯಾತ್ರಾರ್ಥಿಗಳಿಗೆ ಅದು ದುಬಾರಿಯೆನಿಸಲಿದೆ ಎಂದು ವರದಿಯಾಗಿದೆ. ಉಮ್ರಕ್ಕೆ ಈಗಿರುವ ವೀಸಾದರದಲ್ಲಿ ಶೇ. 180ರಷ್ಟು ಹೆಚ್ಚಳವಾಗಲಿದೆ ಎಂದು ಲೆಕ್ಕಹಾಕಲಾಗಿದೆ.
ಉಮ್ರ ವೀಸಾಕ್ಕೆ ಈವರೆಗೆ ಸೌದಿ ಸರಕಾರ ಪ್ರತ್ಯೇಕ ದರ ವಿಧಿಸುತ್ತಿರಲಿಲ್ಲ. ಆದರೆ ನೇರ ವೀಸಾ ನೀಡುವುದನ್ನು ಸ್ಥಗಿತಗೊಳಿಸಿದ ಬಳಿಕ ಅದು ವೀಸಾವನ್ನು ಏಜೆನ್ಸಿ ಮೂಲಕ ನೀಡಲು ಆರಂಭಿಸಿತು. ಈ ಪ್ರಕ್ರಿಯೆ ಆರಂಭಗೊಂಡ ಮೇಲೆ ವೀಸಾಕ್ಕೆ ಏಜೆನ್ಸಿಗಳು250ರಿಯಾಲ್‌ವರೆಗೂ ವಸೂಲು ಮಾಡುತ್ತಿದ್ದವು. ಈಗ ಸೌದಿ ಸರಕಾದ ಹೊಸ ನಿರ್ಧಾರದ ಪ್ರಕಾರ ಉಮ್ರ ವೀಸಾಕ್ಕೆ ಸರಕಾರಕ್ಕೆ 2000 ರಿಯಾಲ್ ನೀಡಬೇಕಾಗುತ್ತದೆ. ಏಜೆನ್ಸಿ ಮೂಲಕ ವೀಸಾ ಯಾತ್ರಾರ್ಥಿಗಳ ಕೈಸೇರುವಾಗ ಅದರ ಮೊತ್ತ ಎಷ್ಟು ಹೆಚಾಗಬಹುದೆಂದು ಈಗ ನಿಖರವಾಗಿ ಅಂದಾಜಿಸಲು ಸಾಧ್ಯವಿಲ್ಲ. ಆದರೆ ಮೊದಲ ಬಾರಿ ಉಮ್ರ ತೆರಳುವವರಿಗೆ ಮಾತ್ರ ಇದು ಅನ್ವಯಿಸುವುದಿಲ್ಲ. ಹೊಸ ವೀಸಾ ದರ ಹೊಸ ಹಿಜರಿ ವರ್ಷದ ಒಂದನೆ ತಾರೀಕಿನಿಂದ ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.