ದುಬೈ: ಗೆಳೆಯರೊಂದಿಗೆ ಸ್ನಾನಕ್ಕೆ ಹೋದ ಭಾರತೀಯ ಯುವಕ ಮೃತ್ಯು
Update: 2016-10-01 15:29 IST
ದುಬೈ, ಅಕ್ಟೋಬರ್ 1: ಜುಮೈರ ಬೀಚ್‌ನಲ್ಲಿ ಗೆಳೆಯರ ಸಂಗಡ ಸ್ನಾನಕ್ಕೆ ಹೋದ ಕೇರಳದ ಯುವಕನೊಬ್ಬ ನೀರಲ್ಲಿ ಮುಳುಗಿ ಮೃತನಾದ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ.ದುಬೈ ಅಲ್‌ಬರ್ಷದ ಅಲ್‌ರಸಾಫ್ ಗ್ರೋಸರಿಯ ಉದ್ಯೋಗಿ ಮಲಪ್ಪುರಂ ಚಂಙನಕಾಟ್ಟಿಲ್ ನೌಷಾದ್(28) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಶುಕ್ರವಾರ ಬೆಳಗ್ಗೆ3:30ಕ್ಕೆ ಎಂಟು ಮಂದಿ ಗೆಳೆಯರೊಂದಿಗೆ ಸ್ನಾನಕ್ಕೆ ಹೋಗಿದ್ದು, ನೀರಲ್ಲಿ ಮುಳುಗಿದಾಗ ಗೆಳೆಯರು ನೌಷಾದ್‌ನನ್ನು ದಡಕ್ಕೆ ತಂದಿದ್ದರು.
ನಂತರ ಆ್ಯಂಬುಲೆನ್ಸ್‌ನಲ್ಲಿ ಅಲ್‌ಬರ್ಷಾದ ಸೌದಿ ಜರ್ಮನ್ ಆಸ್ಪತ್ರೆಗೆ ದಾಖಲಿಸಲಾದರೂ ಆತ ಮೃತನಾಗಿದ್ದಾನೆ.
ಎಂಟು ವರ್ಷಗಳಿಂದ ಅಲ್‌ರಷಾಪ್ ಗ್ರೋಸರಿಯಲ್ಲಿ ನೌಷಾದ್ ಕೆಲಸಮಾಡುತ್ತಿದ್ದು, ಮುಂದಿನ ಫೆಬ್ರವರಿಯಲ್ಲಿ ಊರಿಗೆ ತೆರಳುವ ಉದ್ದೇಶವನ್ನು ಹೊಂದಿದ್ದ ಎನ್ನಲಾಗಿದೆ. ಅಗತ್ಯಕ್ರಮಗಳನ್ನು ಪೂರೈಸಿ ಮೃತದೇಹವನ್ನು ಊರಿಗೆ ಕೊಂಡೊಯ್ಯಲಾಗುವುದು ಎಂದು ನೌಷಾದ್‌ನ ಸಹೋದ್ಯೋಗಿಗಳು ತಿಳಿಸಿದ್ದಾರೆಂದು ವರದಿಯಾಗಿದೆ.