×
Ad

ಸೌದಿ ಅರೇಬಿಯ: ಹೆಣ್ಣುಮಗುವಿನ ಕೊರಳು ಕೊಯ್ದು ಕೊಂದ ಮಹಿಳೆ

Update: 2016-10-04 13:12 IST

ಅಲ್‌ಹಸಾ, ಅಕ್ಟೋಬರ್ 4: ಸೌದಿಅರೇಬಿಯದ ಅಲ್‌ಹಸಾದಲ್ಲಿ ಮೂವತ್ತು ವರ್ಷದ ಸ್ವದೇಶಿ ಮಹಿಳೆಯೊಬ್ಬಳು ಪತಿಯ ಮೊದಲ ಪತ್ನಿಗೆ ಜನಿಸಿದ್ದ ಅರುವರ್ಷದ ಹೆಣ್ಣುಮಗುವಿನ ಕೊರಳು ಕೊಯ್ದು ಕೊಲೆ ನಡೆಸಿದ ಘಟನೆ ವರದಿಯಾಗಿದೆ. ಅಲ್‌ಹಸಾ ಮುಬ್ರೀಸ್ ಸಿಟಿಂ ಮಹಾಝಿನ್ ಸ್ಟ್ರೀಟ್‌ನಲ್ಲಿ ಈ ಘಟನೆ ನಡೆದಿದೆ.

ಸೋಮವಾರ ಬೆಳಗ್ಗೆ ಮನೆಯ ಹೊರಗೆ ನಿರ್ಜನ ಪ್ರದೇಶದಲ್ಲಿ ಸುಮಾರು ಆರುವರ್ಷ ವಯಸ್ಸಿನ ಮಗುವಿನ ಮೃತದೇಹವಿರುವುದನ್ನು ನೋಡಿದ ಓರ್ವ ಸ್ವದೇಶಿ ಸುರಕ್ಷಾ ವಿಭಾಗಕ್ಕೆ ಸುದ್ದಿ ಮುಟ್ಟಿಸಿದ್ದ. ನಂತರ ಪೊಲೀಸರು ನಡೆಸಿದ ತನಿಖೆಯಲ್ಲಿ ಮಹಿಳೆಯ ಕ್ರೂರಕೃತ್ಯ ಬಹಿರಂಗವಾಗಿದೆ. ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮನೆಯ ಹೊರಗೆ ಕೊರಳು ಕೊಯ್ದು ಆ ಬಳಿಕ ನಿರ್ಜನ ಪ್ರದೇಶದಲ್ಲಿ ಮಗುವನ್ನು ಎಸೆದಿದ್ದೇನೆಂದು ಯುವತಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾಳೆ. ಕೃತ್ಯಕ್ಕೆ ಬಳಸಿದ ಚಾಕುವನ್ನು ಕೂಡಾ ಸುರಕ್ಷ ವಿಭಾಗ ತನಿಖೆಯ ವೇಳೆ ವಶಪಡಿಸಿಕೊಂಡಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News