×
Ad

ನ್ಯೂಯಾರ್ಕ್ ನ ಯುಎಇ ಕಾನ್ಸುಲೇಟ್ ನಿಂದ ತನ್ನ ಪ್ರಜೆಗಳಿಗೆ ಎಚ್ಚರಿಕೆ

Update: 2016-10-06 18:29 IST

ದುಬೈ, ಅ. 6: ಅಮೆರಿಕದ ಪೂರ್ವ ಕರಾವಳಿಗೆ ಪ್ರಬಲ ಚಂಡಮಾರುತವೊಂದು ಗುರುವಾರ ರಾತ್ರಿ ಅಪ್ಪಳಿಸಲಿದೆ ಎಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿ, ಫ್ಲೋರಿಡದಲ್ಲಿ ವಾಸಿಸುತ್ತಿರುವ ತನ್ನ ಪ್ರಜೆಗಳಿಗೆ ನ್ಯೂಯಾರ್ಕ್‌ನಲ್ಲಿರುವ ಯುಎಇ ಕಾನ್ಸುಲೇಟ್ ಎಚ್ಚರಿಕೆ ನೀಡಿದೆ.

‘‘ಪ್ರಸಕ್ತ ಫ್ಲೋರಿಡ ಮತ್ತು ಅಮೆರಿಕದ ಪೂರ್ವ ಕರಾವಳಿಯುದ್ದಕ್ಕೂ ಇರುವ ಸ್ಥಳಗಳಲ್ಲಿ ವಾಸಿಸುತ್ತಿರುವ ಯುಎಇ ವಿದ್ಯಾರ್ಥಿಗಳು, ರೋಗಿಗಳು ಮತ್ತು ನಾಗರಿಕರ ಗಮನಕ್ಕೆ: ಚಂಡಮಾರುತ ಕುರಿತ ತಾಜಾ ಮಾಹಿತಿಗಳಿಗಾಗಿ ನಿಮ್ಮ ಸ್ಥಳೀಯ ವಾರ್ತಾ ಮತ್ತು ಹವಾಮಾನ ನಿಲಯಗಳಿಗೆ ಕಿವಿಗೊಡುತ್ತಾ ಇರಿ ಹಾಗೂ ಸ್ಥಳೀಯ ಅಧಿಕಾರಿಗಳು ನೀಡುವ ಎಲ್ಲ ಅಧಿಕೃತ ಸೂಚನೆಗಳನ್ನು ಪಾಲಿಸಿ’’ ಎಂದು ನ್ಯೂಯಾರ್ಕ್‌ನಲ್ಲಿರುವ ಯುಎಇ ಕಾನ್ಸುಲೇಟ್ ಟ್ವೀಟ್ ಮಾಡಿದೆ.

ಚಂಡಮಾರುತ ‘ಮ್ಯಾಥ್ಯೂ’ ಕೆರಿಬಿಯನ್‌ನಲ್ಲಿ ಹೈಟಿ ಮತ್ತು ಕ್ಯೂಬಗಳಿಗೆ ಅಪ್ಪಳಿಸಿದ ಬಳಿಕ ವಾಯುವ್ಯ ದಿಕ್ಕಿನಲ್ಲಿ ಸಾಗುತ್ತಿದೆ ಹಾಗೂ ಅದು ಸಂಜೆ ಮುಗಿಯುವ ಹೊತ್ತಿಗೆ ಪೂರ್ವ ಕರಾವಳಿಯಲ್ಲಿರುವ ಫ್ಲೋರಿಡ ಕರಾವಳಿಗೆ ಅಪ್ಪಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಹವಾಮಾನ ಮುನ್ನೆಚ್ಚರಿಕೆಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News