ಸೌದಿ ಅರೇಬಿಯ: ಫಾಲ್ಕನ್ ಹಕ್ಕಿ 50ಲಕ್ಷರೂಪಾಯಿಗೆ ಮಾರಾಟ !
Update: 2016-10-11 15:10 IST
ಅಲ್‌ಲೈಲತ್, ಅಕ್ಟೋಬರ್ 11: ಫಾಲ್ಕನ್ ಹಕ್ಕಿಯನ್ನು ಏಲಂನಲ್ಲಿ ಸುಮಾರು ಐವತ್ತು ಲಕ್ಷ ರೂಪಾಯಿ(2,80,000 ರಿಯಾಲ್)ಗೆ ಮಾರಲಾಗಿದೆ. ಮಕ್ಕದ ಅಲ್ಲೈತ್‌ನ ಸಿಟಿಯ ಸಮೀಪದ ತುಫೈಲ್‌ನಲ್ಲಿ ಸೌದಿ ಪ್ರಜೆ ಬೇಟೆಯಾಡಿ ಹಿಡಿದ ಫಾಲ್ಕನ್ ಹಕ್ಕಿಯನ್ನು ಭಾರೀ ಮೊತ್ತಕ್ಕೆ ಹರಾಜು ಮಾಡಲಾಗಿದೆ. ಎಂದು ವರದಿಯೊಂದು ತಿಳಿಸಿದೆ.
ಸಂಪೂರ್ಣ ಬೆಳವಣಿಗೆಗೊಂಡ ಶೈವಾನ ತಳಿಯ ಫಾಲ್ಕನ್ ಹಕ್ಕಿನ್ನು ಅಲ್ಲೈತ್ ಸಿಟಿಯ ಶಾಮ ಸ್ಟ್ರೀಟ್‌ನಲ್ಲಿ ನೋಡಿದ ಸೌದಿಯುವಕ ಅದನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾನೆ. ಅದನ್ನೀಗ ಏಲಂ ನಡೆಸಿ ಮಾರಲಾಗಿದೆ. ಫಾಲ್ಕನ್ ಹಕ್ಕಿ ಸಾಕುವುದು. ಅದನ್ನು ಬೇಟೆಗೆ ಉಪಯೋಗಿಸುವುದು, ಸೌಂದರ್ಯ ಸ್ಪರ್ಧೆ ನಡೆಸುವುದು ಅರಬರಲ್ಲಿ ಪ್ರಧಾನ ಮನೋರಂಜನೆಯಾಗಿದೆ ಎಂದು ವರದಿ ತಿಳಿಸಿದೆ.