×
Ad

ಯಮನ್: ಕಾಲರಾ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ

Update: 2016-10-11 21:30 IST

ಸನಾ (ಯಮನ್), ಅ. 11: ಯಮನ್ ರಾಜಧಾನಿ ಸನಾದಲ್ಲಿ ಇನ್ನೂ ಹೆಚ್ಚಿನ ಕಾಲರಾ ಪ್ರಕಣಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಇಲ್ಲಿ ಕಾಲರಾ ಸಾಂಕ್ರಾಮಿಕ ರೋಗ ಹರಡುತ್ತಿರುವುದನ್ನು ವಿಶ್ವಸಂಸ್ಥೆಯು ಶುಕ್ರವಾರ ಮೊದಲ ಬಾರಿಗೆ ವರದಿ ಮಾಡಿತ್ತು. ‘‘ಪ್ರಕರಣಗಳ ಸಂಖ್ಯೆ 5ರಿಂದ 11ಕ್ಕೆ ಏರಿದೆ’’ ಎಂದು ಸಂಘಟನೆಯ ಅಧಿಕಾರಿ ಉಮರ್ ಸಲೇಹ್ ಸನಾದಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು.

ಸಾಂಕ್ರಾಮಿಕ ರೋಗದಿಂದಾಗಿ ಈವರೆಗೆ ಯಾವುದೇ ಸಾವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ರೋಗವು ರಾಜಧಾನಿಯಿಂದ ಹೊರಗೆ ಹರಡದಂತೆ ತಡೆಯಲು ವೈದ್ಯಕೀಯ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News