×
Ad

ಒಮಾನ್: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್‌ನ 20ನೆ ವಾರ್ಷಿಕ ಮಹಾಸಭೆ

Update: 2016-10-13 23:20 IST

ಒಮಾನ್, ಅ.13: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್‌ನ 20ನೆ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಪಾರ್ಕ್ ವೇ ರೆಸ್ಟೋರೆಂಟ್ ’ಮಸ್ಕತ್ರೂವಿ’ಯಲ್ಲಿ ನಡೆಯಿತು.

2016-2017ನೆ ಸಾಲಿನ ನೂತನ ಅಧ್ಯಕ್ಷರಾಗಿ ಮೋನಬ್ಬ ಅಬ್ದುರ್ರಹ್ಮಾನ್ ಉಚ್ಚಿಲ ಆಯ್ಕೆಯಾದರೆ, ಪ್ರಧಾನ ಕಾರ್ಯದರ್ಶಿಯಾಗಿ ಅನ್ಸಾರ್ ಕಾಟಿಪಳ್ಳ, ಗೌರವಾಧ್ಯಕ್ಷರಾಗಿ ರಫೀಕ್ ಪಡುಬಿದ್ರೆ ಪುನರಾಯ್ಕೆಯಾದರು.

ಉಳಿದಂತೆ ಉಪಾಧ್ಯಕ್ಷರಾಗಿ ಅಬ್ಬಾಸ್ ಉಚ್ಚಿಲ ಹಾಗೂ ಅಶ್ರಫ್ ಬಾವ, ಜೊತೆ ಕಾರ್ಯದರ್ಶಿಯಾಗಿ ಪರ್ವೇಝ್ ರಫೀಕ್ ಕಾಟಿಪಳ್ಳ ಹಾಗೂ ಅಲ್ತಾಫ್ ಬೋಳಾರ್ ಆಯ್ಕೆಯಾದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಹಾಲಿ ಅಧ್ಯಕ್ಷ ಮೊಹಿದಿನ್ ಪಡುಬಿದ್ರೆ, ಸಮಯ ಪರಿಪಾಲನೆ, ಹೊಂದಾಣಿಕೆ, ಒಗ್ಗಟ್ಟು ಮತ್ತು ಹುಮ್ಮಸ್ಸಿನಿಂದ ಕೆಲಸಮಾಡಿದರೆ ಡಿಕೆಎಸ್‌ಸಿ ಒಮಾನ್ನಿಂದ ಇನ್ನಷ್ಟು ಕಾರ್ಯಕ್ರಮಗಳು ನಡೆದು ಮರ್ಕಝ್ ತಅಲೀಮ್ ಅಲ್ ಇಹ್ಸಾನ್‌ನ ಏಳಿಗೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಬಹುದು. ಈ ನಿಟ್ಟಿನಲ್ಲಿ ಮುಂದೆ ಆಯ್ಕೆಯಾಗಿ ಬರುವವರಿಗೆ ಸದಸ್ಯರು, ಕಾರ್ಯಕಾರಿ ಸಮಿತಿಯವರು ತಮ್ಮ ಸಂಪೂರ್ಣ ಸಹಕಾರ, ಬೆಂಬಲ ನೀಡಬೇಕೆಂದು ವಿನಂತಿಸಿದರು.

ಕಾರ್ಯದರ್ಶಿ ಅನ್ಸಾರ್ ಕಾಟಿಪಳ್ಳ ವರದಿ ಮತ್ತು ಲೆಕ್ಕಪತ್ರ ಮುಂಡಿಸಿದರು. ಸಭಾಧ್ಯಕ್ಷ ಉಮರ್ ಸಖಾಫಿ ದುಆ ನೆರವೇರಿಸಿದರು. ಇಬ್ರಾ ಬ್ರಾಂಚ್ ಅಧ್ಯಕ್ಷ ಅಬ್ದುರ್ರಹ್ಮಾನ್, ನಿಝ್ವ ಬ್ರಾಂಚ್ ಅಧ್ಯಕ್ಷ ಕಾಸಿಂ ಹಾಜಿ ಅಳಕೆಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಮಾನ್ ಅಶ್ರಫ್ ಬಾವ ಕಿರಾಅತ್ ಪಠಿಸಿದರು. ಅಶ್ರಫ್ ಬಾವ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News