ಜಿಸಿಸಿಯ ಹೆಚ್ಚಿನ ಯುವಕರಿಗೆ ಸರಕಾರಿ ಕೆಲಸವೇ ಬೇಕಿದೆ !
ಮಸ್ಕತ್, ಅಕ್ಟೋಬರ್ 15: ತಮ್ಮ ಪ್ರಜೆಗಳಿಗೆ ಖಾಸಗಿ ಕ್ಷೇತ್ರದ ಉದ್ಯೋಗಾವಕಾಶಗಳಲ್ಲಿ ಆಸಕ್ತಿ ಕುದುರಿಸುವಂತೆ ಮಾಡಲು ವಿವಿಧ ಜಿಸಿಸಿ ರಾಷ್ಟ್ರಗಳ ಸರಕಾರಗಳು ನಡೆಸಿದ ಪ್ರಯತ್ನ ಯಶಸ್ವಿಯಾಗಿಲ್ಲ ಎಂದು ವರದಿಯಾಗಿದೆ. ಗಲ್ಫ್ ಸಹಕಾರಿ ಕೌನ್ಸಿಲ್ ರಾಷ್ಟ್ರಗಳ ಹೆಚ್ಚಿನ ಯುವಕ ಯುವತಿಯರು ಖಾಸಗಿ ಕ್ಷೇತ್ರದ ಕೆಲಸಗಳ ಬಗ್ಗೆ ಆಸಕ್ತಿಯನ್ನೆ ವಹಿಸುತ್ತಿಲ್ಲ ಎಂದು ಎಂಟನೆ ಅರಬ್ ಯೂತ್ ಸರ್ವೇಯಲ್ಲಿ ತಿಳಿದು ಬಂದಿದೆ.
ಶೇ.70ರಷ್ಟು ಮಂದಿ ಸರಕಾರಿ ಕೆಲಸ ಹುಡುಕುತ್ತಿದ್ದಾರೆಂದು ದುಬೈಯಲ್ಲಿ ನಡೆದ ಜಾಗತಿಕ ಇಸ್ಲಾಮಿಕ್ ಇಕಾನಮಿ ಸಮ್ಮೇಳನದಲ್ಲಿ ಮಂಡಿಸಲಾದ ಸಮೀಕ್ಷೆಯಲ್ಲಿ ವಿವರಿಸಲಾಗಿದೆ. ಒಟ್ಟು ಅರಬ್ ರಾಷ್ಟ್ರಗಳ ಲೆಕ್ಕತೆಗೆಯುವಾಗ ಅರ್ಧದಷ್ಟು ಅರಬ್ ಪ್ರಜೆಗಳು ಸರಕಾರಿ ಕೆಲಸಕ್ಕಾಗಿ ಕಾದು ಕುಳಿತಿದ್ದಾರೆ.ಇದು ಜಿಸಿಸಿ ರಾಷ್ಟ್ರಗಳಿಗೆ ಸೀಮಿತಗೊಳಿಸಿದಾಗ ಶೇ.70ರಷ್ಟು ಯುವಕರು ಸರಕಾರಿ ಕೆಲಸವನ್ನುಎದುರು ನೋಡುತ್ತಿದ್ದಾರೆ.
ಈಗ ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರು ಕೂಡಾ ಅವಕಾಶ ದೊರತರೆ ಸರಕಾರಿ ಉದ್ಯೋಗಕ್ಕೆ ಸೇರಲು ಬಯಸುತ್ತಿದ್ದಾರೆ. ಶೇ.51ರಷ್ಟು ಯುವಕರನ್ನು ಹೆಚ್ಚು ಸಂಬಳ ದರ ಆಕರ್ಷಿಸುತ್ತಿದೆ. ಶೇ.35ರಷ್ಟುಮಂದಿಯನ್ನು ಸರಕಾರದ ಉದ್ಯೋಗದಲ್ಲಿ ಇರುವ ಉನ್ನತ ಆರೋಗ್ಯ ರಕ್ಷಣೆ ವ್ಯವಸ್ಥೆಯು ಆಕರ್ಷಿಸುತ್ತಿದೆ. ಶೇ.35 ಮಂದಿ ರಜೆಯಲ್ಲಿಯೂ ಸಂಬಳ ಸಿಗುವ ಸರಕಾರಿ ಉದ್ಯೋಗವನ್ನು ಇಷ್ಟಪಡುತ್ತಿದ್ದಾರೆ. ಸರಕಾರದ ಕೆಲಸದ ಅವಧಿ ಕಡಿಮೆಯಿರುವುದು ಶೇ.27ರಷ್ಟು ಮಂದಿಯನ್ನು ಆಕರ್ಷಿಸಿದೆ ಎಂದುಸಮೀಕ್ಷಾ ವರದಿತಿಳಿಸಿದೆ.
ಶೇ.15ರಷ್ಟು ಸ್ವದೇಶಿ ಯುವಕರು ಖಾಸಗಿ ಕ್ಷೇತ್ರದ ಉದ್ಯೋಗದಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಶೆ. 14ರಷ್ಟು ಯುವಕರಿಗೆ ಅಂತಹ ಯಾವುದೇ ಆದ್ಯತೆಗಳಿಲ್ಲ ಎಂದು ಸಮೀಕ್ಷೆ ತಿಳಿಸಿದೆ.
ಈ ಎಲ್ಲ ಪರಿಸ್ಥಿತಿಯಲ್ಲಿ ಖಾಸಗಿ ಕ್ಷೇತ್ರಕ್ಕೆ ಸ್ವದೇಶಿಗಳನ್ನು ಆಕರ್ಷಿಸಲಿಕ್ಕಾಗಿ ಜಿಸಿಸಿ ಸರಕಾರಗಳು ವಿವಿಧ ನೀತಿಗಳನ್ನು ಆವಿಷ್ಕರಿಸಿತ್ತು. ಆರು ಗಲ್ಫ್ ರಾಷ್ಟ್ರಗಳು ಮತ್ತು ಇತರ ಅರಬ್ ರಾಷ್ಟ್ರಗಳ ಹದಿನೆಂಟುಮತ್ತು 24ವರ್ಷ ವಯೋಮಾನದ 3500 ಸ್ವದೇಶಿ ಪ್ರಜೆಗಳಿಂದ ಸಂಗ್ರಹಿಸಿದ ವಿವರಗಳ ಆಧಾರದಲ್ಲಿ ಸಮೀಕ್ಷೆಯನ್ನು ತಯಾರಿಸಲಾಗಿದೆ ಎಂದು ವರದಿ ತಿಳಿಸಿದೆ.