×
Ad

ಸೌದಿ ಅರೇಬಿಯದಲ್ಲಿ ಭಾರತೀಯರಿಬ್ಬರ ಮೃತ್ಯು: ಕೆಸಿಎಫ್ ಕಾರ್ಯಕರ್ತರ ನೇತೃತ್ವದಲ್ಲಿ ಅಂತ್ಯಕ್ರಿಯೆ

Update: 2016-10-15 23:49 IST

ರಿಯಾದ್, ಅ.15: ರಿಯಾದ್‌ನ ಬೇರೆ ಬೇರೆ ಸ್ಥಳಗಳಲ್ಲಿ ಮರಣ ಹೊಂದಿದ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ವ್ಯಕ್ತಿಗಳಿಬ್ಬರ ಮೃತದೇಹದ ದಫನ ಕಾರ್ಯವನ್ನು ಸೌದಿ ಅರೇಬಿಯಲ್ಲಿ ನೆರವೇರಿಸಲಾಯಿತು.

ಅ.10ರಂದು ರಿಯಾದ್‌ಗೆ ಸಮೀಪದ ಬುರೈದ ಎಂಬಲ್ಲಿ ಅಪಘಾತಕ್ಕೀಡಾಗಿ ಮರಣ ಹೊಂದಿದ ಕಬಕ ಉರಿಮಜಲು ನಿವಾಸಿ ಶಾಹುಲ್ ಹಮೀದ್ ಹಾಗೂ ಅ.12ರಂದು ರಿಯಾದಿನಲ್ಲಿ ಹೃದಯಾಘಾತದಿಂದ ಮರಣ ಹೊಂದಿದ ಮೂಡುಬಿದರೆ ಮೂರ್ನಾಡ್ ನಿವಾಸಿ ಅಬ್ದುಲ್ ಅಝೀಝ್ ಎಂಬಿಬ್ಬರ ಮೃತದೇಹ್ಗಳ ದಫನಕಾರ್ಯಕ್ಕೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಸಾಂತ್ವನ ವಿಭಾಗದ ಕಾರ್ಯಕರ್ತರು ದಾಖಲೆಗಳನ್ನು ಸರಿಪಡಿಸುವಲ್ಲಿ ಸಹಕರಿಸಿದರು.

ಶಾಹುಲ್ ಹಮೀದ್ ಮೃತದೇಹದ ದಫನ ಕಾರ್ಯವು ಬುರೈದ ಹಾಯಿಲ್ ಖಲೀಜ್ ಮಸೀದಿ ದಫನ ಭೂಮಿಯಲ್ಲಿ ಅಪರಾಹ್ನ ಳುಹರ್ ನಮಾಝ್ ಬಳಿಕ ಹಾಗೂ ಅಬ್ದುಲ್ ಅಝೀಝ್ ಅವರ ಮೃತದೇಹದ ದಫನಕಾರ್ಯವು ಅಸರ್ ನಮಾಝ್ನ ಬಳಿಕ ರಿಯಾದ್ ಸಿಟಿಯ ಅಲ್ ರಾಜಿ ಎಕ್ಷಿಟ್ 15ರಲ್ಲಿ ನಡೆಯಿತು.

ಕರ್ನಾಟಕ ಕಲ್ಚರಲ್ ಫೌಂಡೇಶನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಿ.ಪಿ.ಯೂಸುಫ್ ಸಖಾಫಿ ಬೈತಾರ್, ಸಾಂತ್ವನ ವಿಭಾಗ ಚೆಯರ್‌ಮ್ಯಾನ್ ಸಲೀಂ ಕನ್ಯಾಡಿ, ನೇತಾರ ಹಂಝ ಮೈಂದಾಳ, ಬುರೈದಾ ಕೆಸಿಎಫ್‌ನ ಅಬ್ದುರ್ರಝಾಕ್ ಸಜಿಪ, ತಾಜುದ್ದೀನ್ ಉಪ್ಪಿನಂಗಡಿ, ರಿಯಾದ್ ಹಾಗೂ ಬುರೈದಾ ಕಾರ್ಯಕರ್ತರು, ವಿಟ್ಲ ಹಾಗೂ ಮೂಡಬಿದಿರೆ ಎಸ್ಸೆಸ್ಸೆಫ್, ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಸದಸ್ಯರು ಸಹಕರಿಸಿದ್ದರು ಎಂದು ಕೆಸಿಎಫ್ ತಿಳಿಸಿದೆ.
ಇದಕ್ಕೂ ಮೊದಲು ಕೆಸಿಎಫ್ ಸೌದಿ ಅರೇಬಿಯಾದ ಮುಖಂಡರಾದ ನಝೀರ್ ಕಾಶಿಪಟ್ಣ, ಅಹ್ಮದ್ ಸಖಾಫಿ ಕಾಶಿಪಟ್ಣ ನೇತೃತ್ವದ ನಿಯೋಗವೊಂದು ಮೂಡುಬಿದಿರೆಯ ಮೃತರ ಮನೆಗೆ ತೆರಳಿ ಸಾಂತ್ವನ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News