×
Ad

ಸೌದಿ ಅರೇಬಿಯದ ಅಲ್‌ಬಾಹ ದಾಳಿಂಬೆ ಉತ್ಸವಕ್ಕೆ ವಿಪರೀತ ಜನಸಂದಣಿ

Update: 2016-10-17 14:33 IST

ಅಲ್‌ಬಾಹ, ಅಕ್ಟೋಬರ್ 17: ಕಳೆದ ದಿವಸ ಆರಂಭವಾದ ಅಲ್‌ಬಾಹ ದಾಳಿಂಬೆ ಉತ್ಸವವನ್ನು ದರ್ಶಿಸಲು ಜನಪ್ರವಾಹವೇ ಹರಿಯುತ್ತಿದೆ ಎಂದು ವರದಿಯಾಗಿದೆ. ಸ್ಥಳೀಯ ನಿವಾಸಿಗಳು, ಪ್ರವಾಸಿಗರು, ಭಾರೀಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆಂದು ಸಂಘಟಕರು ತಿಳಿಸಿದ್ದಾರೆ. 180ರಷ್ಟು ರೈತರು ಏರ್ಪಡಿಸಿದ ದಾಳಿಂಬೆ ಮೇಳ ಇದು. 250ರಷ್ಟು ಕೃಷಿ ಸ್ಥಳಗಳಿಂದ ತಂದ ಹಣ್ಣುಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ. ಈ ಪ್ರದೇಶದ ರೈತರು ವರ್ಷದಲ್ಲಿ 13 ಟನ್ ದಾಳಿಂಬೆ ಉತ್ಪಾದನೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಹಣ್ಣುಗಳಿಗೆ ಮಾರುಕಟ್ಟೆ ಮಾಡಿಕೊಡುವುದು ಮತ್ತು ರೈತರು ಹೆಚ್ಚಿನಪ್ರಮಾಣದಲ್ಲಿ ದಾಳಿಂಬೆ ಉತ್ಪಾದಿಸುವಂತೆಮಾಡುವುದು ದಾಳಿಂಬೆ ಉತ್ಸವದ ಉದ್ದೇಶವಾಗಿದೆ. ’ರೂಮಾನ್ ಅಲ್‌ಬಾಹ’ ಎಂಬ ಈ ಉತ್ಸವದಲ್ಲಿ ಇತರ ಹಣ್ಣುಗಳನ್ನು ಕೂಡಾಪ್ರದರ್ಶಿಸಲಾಗುತ್ತಿದೆ. ಕೃಷಿಯ ಮಹತ್ವವನ್ನು ತಿಳಿಹೇಳುವ ತರಗತಿಗಳು, ಕರಪತ್ರ ಇತ್ಯಾದಿ ವಿತರಣೆಕೂಡಾ ಉತ್ಸವದಲ್ಲಿ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News