ಕತರ್: ಕೆಸಿಎಫ್‌ನಿಂದ ‘ಮುಲಾಖಾತ್-2016’ ತರಬೇತಿ ಶಿಬಿರ
ದೋಹಾ, ಅ.17: ಯಾವುದೇ ಸಂಘಟನೆಗಳಿಗೆ ಪೂರ್ವ ಕಾಲದ ಸಲಫ್ ಸ್ವಾಲಿಹ್‌ಗಳ ಆಶೀರ್ವಾದ ಹಾಗೂ ಹಿರಿಯರ ಅನುಗ್ರಹವಿಲ್ಲದೆ ಯಶಸ್ಸಿನ ಹಾದಿ ತುಳಿಯಲು ಅಸಾಧ್ಯವೆಂದು ಅಖಿಲ ಭಾರತ ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷ ಡಾ.ಮುಹಮ್ಮದ್ ಫಾರೂಕ್ ನಈಮಿ ಹೇಳಿದರು.
ಕರ್ನಾಟಕ ಕಲ್ಚರಲ್ ಫೌಂಡೇಶನ್ ಕತಾರ್ ರಾಷ್ಟ್ರೀಯ ಸಮಿತಿ ವತಿಯಿಂದ ದೋಹಾದಲ್ಲಿ ಇತ್ತೀಚೆಗೆ ನಡೆದ ’ಮುಲಾಖಾತ್ -2016’ ವಾರ್ಷಿಕ ಶಿಬಿರದ ಅಧ್ಯಯನ ಸೆಶನ್‌ನಲ್ಲಿ ತರಬೇತಿ ನೀಡಿದರು.
ಸಂಘಟನೆಯ ಪ್ರತಿಯೊಬ್ಬ ಸದಸ್ಯರೂ ಅಲ್ಲಾಹನ ಪ್ರೀತಿಯನ್ನು ಮಾತ್ರ ಉದ್ದೇಶಿಸಿ ಸತ್ಕರ್ಮ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಲ್ಲಿ ತನ್ನ ಮತ್ತು ಸಂಘಟನೆಯ ಸದುದ್ದೇಶ ಸಫಲವಾಗುವುದರಲ್ಲಿ ಸಂದೇಹವಿಲ್ಲವೆಂದರು.
ಕಡವತ್ತೂರ್ ಅಬ್ದುಲ್ಲಾ ಮುಸ್ಲಿಯಾರ್ ದುಆ ನೆರವೇರಿಸಿದರು. ‘ರಿಸಾಲ ಸ್ಟಡಿ ಸರ್ಕಲ್’ ಕತರ್‌ನ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಜಲೀಲ್ ಇರ್ಫಾನಿ ಉದ್ಘಾಟಿಸಿದರು. ಕೆಸಿಎಫ್ ಕತರ್ ರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗದ ಅಧ್ಯಕ್ಷ ಯೂಸುಫ್ ಸಖಾಫಿ ಅಯ್ಯಂಗೇರಿ ಅಧ್ಯಕ್ಷತೆ ವಹಿಸಿದ್ದರು.
ಕೆಸಿಎಫ್ ಕತರ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಹಾಫಿಳ್ ಉಮರುಲ್ ಫಾರೂಕ್ ಸಖಾಫಿ, ಕೆಸಿಎಫ್ ಇಂಟರ್ ನ್ಯಾಷನಲ್ ಕೌನ್ಸಿಲ್ ಇಹ್ಸಾನ್ ವಿಭಾಗ ಕಾರ್ಯದರ್ಶಿ ಅಬ್ದುರ್ರಹೀಂ ಸಅದಿ ಪಾಣೆಮಂಗಳೂರು, ‘ರಿಸಾಲ ಸ್ಟಡಿ ಸರ್ಕಲ್’ನ ಗಲ್ಫ್ ಕೌನ್ಸಿಲ್ ಫೈನಾನ್ಸ್ ಕನ್ವೀನರ್ ಜಮಾಲ್ ಅಝ್ಹರಿ ನೇತೃತ್ವ ವಹಿಸಿದರು.
ಸಿದ್ದೀಕ್ ಕೃಷ್ಣಾಪುರ, ಮುಹಮ್ಮದ್ ಹನೀಫ್ ಪಾತೂರು ಮತ್ತು ನಝೀರ್ ಮಡಿಕೇರಿ ಕ್ರಮವಾಗಿ ದೋಹಾ, ಅಝೀಝಿಯ್ಯ ಹಾಗೂ ಮದೀನಾ ಖಲೀಫಾ ಝೋನ್‌ಗಳ ಚರ್ಚೆಯ ಸಂಕ್ಷಿಪ್ತ ವರದಿಯನ್ನು ಮಂಡಿಸಿದರು. ಮಿರ್ಷಾದ್ ಕನ್ಯಾನ ಸ್ವಾಗತಿಸಿ, ಮುಹಮ್ಮದ್ ಹನೀಫ್ ಪಾತೂರು ವಂದಿಸಿದರು.