ಪ್ಯಾರಲಿಂಪಿಕ್ಸ್ ಪದಕ ವಿಜೇತನಿಗೆ 50,000 ದೀನಾರ್ ಪಾರಿತೋಷಕ

Update: 2016-10-21 06:29 GMT

ಕುವೈಟ್ ಸಿಟಿ, ಅಕ್ಟೋಬರ್ 21: ಬ್ರಝಿಲ್‌ನ ರಿಯೊಡಿಜನೈರೊದಲ್ಲಿ ನಡೆದ ಪ್ಯಾರಲಿಂಪಿಕ್ಸ್‌ನಲ್ಲಿ ಚಿನ್ನಗೆದ್ದ ಕುವೈಟ್ ಅಥ್ಲೆಟ್ ಅತ್ಸರ್ ಅಹ್ಮದ್ ನಕ ಅಲ್ ಮುತೈರಿಗೆ ಕುವೈಟ್ ಅಮೀರ್ 50,000 ದೀನಾರ್ ಮತ್ತು ಮನೆಕಟ್ಟಲು ಜಮೀನು ನೀಡಿದ್ದಾರೆಂದು ವರದಿಯಾಗಿದೆ.

 ಕುವೈಟ್ ಅಮೀರ್ ಶೇಖ್ ಸಬಾಹ್ ಅಲ್ ಅಹ್ಮದ್ ಅಲ್ ಜಾಬಿರ್ ಅಸ್ಸಬಾಹ್ ಈ ಪಾರಿತೋಷಕವನ್ನು ವಿತರಿಸಿದ್ದು, ಅಲ್‌ಮುತೈರಿ 100 ಮೀಟರ್ ವ್ಹೀಲ್ ಚೇರ್ ಸ್ಪರ್ಧೆಯಲ್ಲಿ ಚಿನ್ನಗಳಿಸಿ ಕುವೈಟ್‌ಗೆ ಗೌರವವನ್ನು ತಂದುಕೊಟ್ಟಿದ್ದರು. ಕೋಚ್ ಮುಹಮ್ಮದ್ ಫರ್ಹಾನ್‌ರ ಅಧೀನದಲ್ಲಿ ತರಬೇತಿ ಪಡೆಯುತ್ತಿರುವ ಇಪ್ಪತ್ತೆರಡು ವರ್ಷ ವಯಸ್ಸಿನ ಅಲ್‌ಮುತೈರಿ ಲಂಡನ್‌ನಲ್ಲಿ ನಡೆದಿದ್ದ ಪ್ಯಾರಲಿಂಪಿಕ್ಸ್‌ನಲ್ಲಿ ಫೈನಲ್ ತಲುಪಿದ್ದರು.

ವ್ಹೀಲ್ ಚೇರ್ ಬಾಸ್ಕೆಟ್‌ಬಾಲ್‌ನಲ್ಲಿಯೂ ಮುತೈರಿ ಸಾಮರ್ಥ್ಯವನ್ನು ತೋರಿಸಿರುವ ಮುತೈರಿ ದೋಹದಲ್ಲಿ ನಡೆದ ಐಪಿಸಿ ವರ್ಲ್ಡ್ ಚಾಂಪಿಯನ್ ಶಿಪ್‌ನಲ್ಲಿಯೂ 100 ಮೀಟರ್ ವಿಭಾಗದಲ್ಲಿ ಚಿನ್ನ ಸಂಪಾದಿಸಿದ್ದರು. 2014ರಲ್ಲಿ ಇಂಚಿಯಾನ್ ಏಷ್ಯನ್ ಪ್ಯಾರಲಿಂಪಿಕ್ಸ್‌ನಲ್ಲಿ 100 ಮೀಟರ್, 200ಮೀಟರ್‌ನಲ್ಲಿ ಬೆಳ್ಳಿಪದಕವನ್ನುಗಳಿಸಿದ್ದರು. ಹುಟ್ಟಿದಾಗಲೇರೋಗಹೊಂದಿದ್ದ ಮುತೈರಿಯ ಸೊಂಟದ ಕೆಳಭಾಗ ಸ್ವಲ್ಪಮಾತ್ರ ಚಲನೆಯಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News