×
Ad

ದುಬೈಯಲ್ಲಿ ನವೆಂಬರ್ 25 ರಂದು "Ahlan UAE" 2016 ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಿರುವ KSCC

Update: 2016-10-21 17:10 IST

ದುಬೈ,ಅ.21: ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್(ರಿ)-KSCC ಯು ಏ ಇ, ವತಿಯಿಂದ ಆಯೋಜಿಸಲಿರುವ "Ahlan UAE" 2016 ನವೆಂಬರ್ 25 ರಂದು ದುಬೈ ಅಲ್ ಕುಸೈಸ್ ಕ್ರೆಸೆಂಟ್ ಇಂಗ್ಲೀಷ್  ಸ್ಕೂಲ್ ನಲ್ಲಿ ನಡೆಯಲಿದೆ.

   ಅನಿವಾಸಿ ಭಾರತೀಯ ಕುಟುಂಬಗಳಿಗೋಸ್ಕರ    "Ahlan UAE" 2016, "let's make memories together "ಎಂಬ ಶೀರ್ಷಿಕೆಯಲ್ಲಿ ಸಂಯೋಜಿಸಿರುವ ಈ ಕಾರ್ಯಕ್ರಮದಲ್ಲಿ ರಸಪ್ರಶ್ನೆ, ಚಿತ್ರ ಬಿಡಿಸುವಿಕೆ , ಗಾಯನ ಸ್ಪರ್ಧೆಗಳು,ಸ್ವಾದಿಷ್ಟ ಅಡುಗೆ, ಚದುರಂಗ, ಛದ್ಮವೇಷ, ಮದುರಂಗಿ ಹಾಗು ಇನ್ನಿತರ ಹಲವಾರು ಮನರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ 
   ಕಾರ್ಯಕ್ರಮದಲ್ಲಿ ಭಾರತದ ಹಲವು ರಾಜ್ಯಗಳ ಸಾಂಪ್ರದಾಯಿಕ ವೇಷಭೂಷಣ ಸ್ಪರ್ಧೆಯು ಎಲ್ಲರ ಗಮನ ಸೆಳೆಯಲಿದ್ದು ಇತಿಹಾಸವನ್ನು ನಿರ್ಮಿಸಲಿದೆ. 
   ಈ ಕಾರ್ಯಕ್ರಮದ ಲಾಂಛನ ಮತ್ತು ಆಮಂತ್ರಣ ಪತ್ರಿಕೆಯನ್ನು ಈಗಾಗಲೇ ಬಿಡುಗಡೆ ಗೊಳಿಸಲಾಗಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸುವವರು ಸಾಮಾಜಿಕ ತಾಣಗಳಾದ ಫೇಸ್ಬುಕ್ , ವಾಟ್ಸಾಪ್ ಮುಖಾಂತರ ನೊಂದಾವಣೆ ಮಾಡಿಕೊಳ್ಳಬಹುದು ಅಲ್ಲದೇ 
ದೂರವಾಣಿ ಕರೆಯ  ಮುಖಾಂತರವೂ  ತಮ್ಮ ನೋಂದಾವಣಿಯನ್ನು  ಖಚಿತಪಡಿಸಿಕೊಳ್ಳಬಹುದಾಗಿದೆ. ಪ್ರಥಮವಾಗಿ ನೊಂದಾವಣೆ ಮಾಡಿಕೊಂಡ ಕುಟುಂಬಗಳಿಗೆ ಪ್ರಾಶಸ್ತ್ಯವನ್ನು ನೀಡಲಾಗುವುದು
ದೂರವಾಣಿ  ಸಂಖ್ಯೆ:    055 546 5224, 055 534 8230
    ಚಿಣ್ಣರ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸುವ ಪುಟಾಣಿಗಳ ಆಯ್ಕೆ ಪ್ರಕ್ರಿಯೆಯು ಈಗಾಗಲೇ ಫ್ರಾರಂಭ ವಾಗಿದ್ದು ಭಾಗವಹಿಸುವ ಪುಟಾಣಿಗಳ 2  ನಿಮಿಷಗಳ ಗಾಯನದ(ದೇಶಭಕ್ತಿ ಗೀತೆ) ವೀಡಿಯೋ ರೆಕಾರ್ಡಿಂಗನ್ನು ವಾಟ್ಸಾಪ್ ಸಂಖ್ಯೆ  :  0555971237  ಗೆ ಕಳುಹಿಸಬಹುದೆಂದೂ  ಅಂತಿಮ ಹಂತದ ಸ್ಪರ್ಧಿಗಳನ್ನು ಪರಿಣತ  ತೀರ್ಪುಗಾರರು  ಆಯ್ಕೆ ಮಾಡಲಿದ್ದಾರೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News