ಕೆಲಸ ಮಾಡುತ್ತಿದ್ದ ಅಂಗಡಿಯಿಂದ 3.4 ಕೋಟಿ ರೂ. ಚಿನ್ನದೊಂದಿಗೆ ಪರಾರಿ
Update: 2016-10-22 19:54 IST
ಶಾರ್ಜಾ, ಅ. 22: ತಾನು ಕೆಲಸ ಮಾಡುತ್ತಿದ್ದ ಆಭರಣ ಮಾರಾಟ ಮಳಿಗೆಯಿಂದ ಭಾರೀ ವೌಲ್ಯದ ಚಿನ್ನಾಭರಣಗಳನ್ನು ಕದ್ದು ದೇಶ ಬಿಟ್ಟು ಪರಾರಿಯಾದ ವ್ಯಕ್ತಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದರು.
ಶಾರ್ಜಾ ಇಂಡಸ್ಟ್ರಿಯಲ್ ಏರಿಯ ನಂ. 1ರಲ್ಲಿರುವ ಆಭರಣ ಅಂಗಡಿಯಿಂದ ಆತ 2 ಮಿಲಿಯ ದಿರ್ಹಮ್ (ಸುಮಾರು 3.64 ಕೋಟಿ ರೂಪಾಯಿ) ವೌಲ್ಯದ ಚಿನ್ನವನ್ನು ಕದ್ದಿದ್ದಾನೆ.
ಶುಕ್ರವಾರ ಬೆಳಿಗ್ಗೆ ಆತ ಚಿನ್ನವನ್ನು ಕದ್ದನು ಹಾಗೂ ಕದ್ದಕೂಡಲೇ ದೇಶವನ್ನು ತೊರೆದನು.
ಅಪರಾಧ ಪತ್ತೆ ಇಲಾಖೆಯ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಬಂಧನಾದೇಶವನ್ನು ಹೊರಡಿಸಿರುವ ಪೊಲೀಸರು ಇಂಟರ್‌ಪೋಲ್‌ಗೆ ಮಾಹಿತಿ ನೀಡಿದ್ದಾರೆ.