ಅರಬ್ ರೀಡಿಂಗ್ ಚ್ಯಾಲೆಂಜ್: ಏಳು ವರ್ಷದ ಈ ಪೋರನಿಗೆ ಕೋಟಿ ರೂ. ಬಹುಮಾನ

Update: 2016-10-25 08:59 GMT

ದುಬೈ,ಅ. 25: ಅರಬ್ ಜಗತ್ತಿನಲ್ಲಿ ಪುಸ್ತಕ ಓದುವಿಕೆಯನ್ನು ಪ್ರೋತ್ಸಾಹಿಸುವ ಅಂಗವಾಗಿ ನಡೆದ ಅರಬ್ ರೀಡಿಂಗ್ ಚ್ಯಾಲೆಂಜ್‌ಗೆ ದುಬೈಯಲ್ಲಿಸಮಾರೋಪ ನಡೆದಿದೆ. ಒಂದು ವರ್ಷ ಸುದೀರ್ಘ ಅವಧಿಯಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ವಿವಿದ ರಾಷ್ಟ್ರಗಳ 35 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು. ಇದಕ್ಕೆ ಸಂಬಂಧಿಸಿ ನಡೆದ ಸ್ಪರ್ಧೆಯಲ್ಲಿ ಅಲ್ಜೀರಿದಯ ಏಳು ವಯಸ್ಸಿನ ಮುಹಮ್ಮದ ಫರಾ ಒಂದೂವರೆ ಲಕ್ಷ ಡಾಲರ್(ಸುಮಾರು ಒಂದು ಕೋಟಿ ರೂಪಾಯಿ) ಕ್ಯಾಶ್ ಅವಾರ್ಡ್ ಗೆದ್ದಿದ್ದಾನೆಂದು ವರದಿ ತಿಳಿಸಿದೆ.

ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಸಮೀಪದ ಅಪೇರಾ ಹೌಸ್‌ನಲ್ಲಿ ಕಾರ್ಯಕ್ರಮ ನಡೆದಿತ್ತು. ಯುಎಇ ಉಪಾಧ್ಯಕ್ಷ ಮತ್ತು ಪ್ರಧಾನಿ ಹಾಗೂ ದುಬೈ ಆಡಳಿತಾಧಿಕಾರಿ ಶೇಖ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಂ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಫೆಲೆಸ್ತೀನ್‌ನ ತಾಲಾ ಅಲ್ ಅಮಲ್ ಸ್ಕೂಲ್ ಅರಬ್ ರೀಡಿಂಗ್ ಚ್ಯಾಲೆಂಜ್‌ನಲ್ಲಿ ಪ್ರಥಮಸ್ಥಾನ ಗಳಿಸಿದೆ ಅದಕ್ಕೆ ಹತ್ತುಲಕ್ಷ ಯುಎಸ್ ಡಾಲರ್ ಬಹುಮಾನ ನೀಡಲಾಗಿದೆ. ವಿವಿಧ ಹಂತಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಕೊನೆಯ ಸುತ್ತಿಗೆ ಹತ್ತು ಮಂದಿ ಆಯ್ಕೆಯಾಗಿದ್ದರು. ಇವರಲ್ಲಿ ಮೂವರನ್ನು ಪ್ರಶಸ್ತಿ ಸುತ್ತಿಗೆ ಕರೆಯಲಾಗಿತ್ತು. 2015ರಲ್ಲಿ ಶೇಖ್ ಮುಹಮ್ಮದ್ ಅರಬ್ ರೀಡಿಂಗ್ ಚ್ಯಾಲೆಂಜನ್ನು ಘೋಷಿಸಿದ್ದರು. ಆ ಪ್ರಕಾರ ಐದು ಕೋಟಿ ಪುಸ್ತಕಗಳನ್ನು ವಿವಿಧ ದೇಶಗಳ ಶಾಲೆಗಳಿಗೆ ನೀಡಲಾಗಿತ್ತು. ಒಂದುಕೋಟಿ ಹತ್ತುಲಕ್ಷ ದಿರ್‌ಹಮ್ ಕ್ಯಾಶ್ ಈ ಪ್ರಶಸ್ತಿಗಳಿಗಾಗಿ ವ್ಯಯಿಸಲಾಗಿದೆ. 21    ರಾಷ್ಟ್ರಗಳ 30,000 ಶಾಲೆಗಳ 35 ಲಕ್ಷ ಮಕ್ಕಳು ಭಾಗವಹಿಸಿದ್ದಾರೆ. ಪುಸ್ತಕ ಓದುವಿಕೆ ಹೊಸ ಕ್ರಾಂತಿಯನ್ನು ಮಾಡಲು ಈ ಯೋಜನೆಗೆ ಸಾಧ್ಯವಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News