ದುಬೈ: ಕೆಸಿಎಫ್‌ನಿಂದ ಡಿಸೆಂಬರ್ 23ರಂದು 'ಇಲಲ್ ಹಬೀಬ್' ಮೀಲಾದ್ ಸಮಾವೇಶ

Update: 2016-10-26 10:55 GMT

ದುಬೈ, ಅ.26: ಅನಿವಾಸಿ ಕನ್ನಡಿಗರ ಧಾರ್ಮಿಕ ಸಾಂಸ್ಕೃತಿಕ ಸಂಘಟನೆ ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ‘ಪ್ರೀತಿಯ ಪ್ರವಾದಿ  ಶಾಂತಿಯ ಹಾದಿ’ ಎಂಬ ಘೋಷ ವಾಕ್ಯದೊಂದಿಗೆ ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.)ರವರ 1491ನೆ ಜನ್ಮ ದಿನಾಚರಣೆಯನ್ನು ಪವಿತ್ರ ರಬೀವುಲ್ ಅವ್ವಲ್ ಮಾಸದಲ್ಲಿ ಪ್ರತೀ ರಾಷ್ಟ್ರಗಳಲ್ಲೂ ‘ಇಲಲ್ ಹಬೀಬ್’ ಎಂಬ ಶೀರ್ಷಿಕೆಯಡಿ ಮೀಲಾದ್ ಸಮಾವೇಶ ಹಮ್ಮಿಕೊಳ್ಳಲು ತೀರ್ಮಾನಿಸಿದೆ.

ಅದರಂತೆ ಕೆಸಿಎಫ್ ದುಬೈ ಸಮಿತಿಯ ವತಿಯಿಂದ ಡಿಸಂಬರ್ 23ರಂದು ಮೀಲಾದ್ ಸಮಾವೇಶ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಎಸ್‌ವೈಎಸ್ ಕಾರ್ಯದರ್ಶಿ ಎಂ.ಎಸ್.ಎಂ.ಅಬ್ದುರ್ರಶೀದ್ ಝೈನಿ ಅಲ್ ಕಾಮಿಲ್ ಸಖಾಫಿ ಭಾಗವಹಿಸುವರು.

 ಈ ಸಮಾವೇಶದ ಯಶಸ್ಸಿಗಾಗಿ 101 ಸದಸ್ಯರನ್ನೊಳಗೊಂಡ ಸ್ವಾಗತ ಸಮಿತಿಯನ್ನು ಇತ್ತೀಚೆಗೆ ರಚಿಸಲಾಯಿತು. ಕೆಸಿಎಫ್ ದುಬೈ ಝೋನ್ ಅಧ್ಯಕ್ಷ ಮಹ್‌ಬೂಬ್ ಸಖಾಫಿ ಕಿನ್ಯ ಅಧ್ಯಕ್ಷತೆಯಲ್ಲಿ ಸೇರಿದ ವಿಶೇಷ ಸಭೆಯನ್ನು ‘ಅಸ್ಸುಫ್ಪ’ ಚೀಫ್ ಅಮೀರ್ ಇಬ್ರಾಹೀಂ ಸಖಾಫಿ ಕೆದುಂಬಾಡಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರವಾದಿ ಜನ್ಮ ದಿನಾಚರಣೆಯನ್ನು ಪವಿತ್ರ ಕುರ್‌ಆನ್ ಹಾಗೂ ಹದೀಸ್‌ಗಳ ಪುರಾವೆಸಹಿತ ಮಂಡಿಸಿದರು.

ದುಬೈ ಝೋನ್ ಶಿಕ್ಷಣ ಸಮಿತಿ ಅಧ್ಯಕ್ಷ ಅಬ್ದುಲ್ ಅಝೀಝ್ ಲತೀಫಿ ಮೀಲಾದ್‌ ಸ್ವಾಗತ ಸಮಿತಿಯ ಪ್ಯಾನಲ್ ವಾಚಿಸಿದರು.
ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಅಶ್ರಫ್ ಹಾಜಿ ಅಡ್ಯಾರ್, ಕನ್ವೀನರ್‌ರಾಗಿ ಹಂಝ ಎಮ್ಮೆಮಾಡು ಹಾಗೂ ಕೋಶಾಧಿಕಾರಿಯಾಗಿ ಕುಡ್ತಮುಗೇರು ಅಬ್ದುಲ್ಲಾ ಉಸ್ತಾದರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದ ವ್ಯವಸ್ಥಾಪಕರಾಗಿ ಇಕ್ಬಾಲ್ ಕಾಜೂರು ಹಾಗೂ ಫಾರೂಕ್ ಜಾರಿಗೆಬೈಲು, ಉಪಾಧ್ಯಕ್ಷರಾಗಿ ಬಶೀರ್ ಬೊಳುವಾರು, ಅಬೂಬಕರ್ ಹಾಜಿ ಕೊಟ್ಟಮುಡಿ, ನಝೀರ್ ಹಾಜಿ ಕೆಮ್ಮಾರ ಹಾಗೂ ಜತೆ ಕನ್ವೀನರಾಗಿ ಅರಾಫತ್ ನಾಪೊಕ್ಲು, ನವಾಝ್ ಹಾಜಿ ಕೋಟೆಕಾರು, ಹಸನ್ ಜಾನ್ಸಲೆಯವರನ್ನು ನೇಮಕ ಮಾಡಲಾಯಿತು.

ಕಾರ್ಯಕಾರಿ ಸದಸ್ಯರಾಗಿ ಹುಸೈನ್ ಹಾಜಿ ಕಿನ್ಯ, ಅಬ್ದುಲ್ ಶುಕೂರ್ ಮಣಿಲ, ಅಬ್ದುಲ್ ಜಲೀಲ್ ನಿಝಾಮಿ, ಇಬ್ರಾಹೀಂ ಸಖಾಫಿ ಕೆದುಂಬಾಡಿ, ಇಬ್ರಾಹೀಂ ಮದನಿ ಹೋರ್ಲಂಝ್, ಅಬ್ದುರ್ರಹೀಂ ಕೋಡಿ, ಫರಾಝ್ ಕೋಟೆಕಾರು, ಅಝೀಂ ಉಚ್ಚಿಲ, ಮೂಸ ಹಾಜಿ ಬಸರ, ಅಬ್ದುಲ್ ಅಝೀಝ್ ಕಾಟಿಪಳ್ಳ, ಇಬ್ರಾಹೀಂ ಹಾಜಿ ಹಳೆಯಂಗಡಿ, ಅಬ್ದುರ್ರವೂಫ್ ಕೋಟೆಕಾರು, ಇಂಜಿನಿಯರ್ ಮುಹಮ್ಮದ್ ಸುಳ್ಯ ಹಾಗೂ ಅಬ್ದುಲ್ ಕರೀಂ ಉಳ್ಳಾಲ ಆಯ್ಕೆಯಾದರು.

ಫೈನಾನ್ಸಿಯಲ್ ಚೇರ್‌ಮೆನ್ ಆಗಿ ಇಬ್ರಾಹೀಂ ಹಾಜಿ ಕೊಳ್ನಾಡು ಹಾಗೂ ಕನ್ವೀನರ್‌ರಾಗಿ ಅಸ್ಗರ್ ಮೂರ್ನಾಡು, ಪಬ್ಲಿಷಿಂಗ್ ಚೇರ್‌ಮೆನ್ ಆಗಿ ಅಬ್ದುಲ್ ಅಝೀಝ್ ಅಹ್ಸನಿ ಹಾಗೂ ಕನ್ವೀನರ್‌ರಾಗಿ ನಿಯಾಝ್ ಬಸರ, ಮೀಡಿಯಾ ಚೇರ್‌ಮೆನ್ ಆಗಿ ರಿಯಾಝ್ ಕೊಂಡಂಗೇರಿ ಹಾಗೂ ಕನ್ವೀನರ್‌ರಾಗಿ ಆಸಿಫ್ ಇಂದ್ರಾಜೆ, ಫುಡ್ ಆ್ಯಂಡ್ ರೀಫ್ರೆಶ್ಮೆಂಟ್‌ಚೇರ್‌ಮೆನ್ ಆಗಿ ಕಾಸಿಂ ಮದನಿ ತೆಕ್ಕಾರು, ಕನ್ವೀನರ್‌ರಾಗಿ ಅಬ್ದುಲ್ ಹಮೀದ್ ಅಳಿಕೆ ಹಾಗೂ ಕೋ ಆರ್ಡಿನೇಟರ್ ಆಗಿ ಅಬ್ದುಲ್ ಅಝೀಝ್ ಲತೀಫಿ, ಅತಿಥಿ ನಿರ್ವಹಣಾ ಚೇರ್‌ಮೆನ್ ಆಗಿ ಅಲಿ ಕುಳೂರು ಹಾಗೂ ಕನ್ವೀನರ್‌ರಾಗಿ ಸೈಫುದ್ದೀನ್ ಪಟೇಲ್, ಸ್ಟೇಜ್‌ ನಿರ್ವಾಹಕರಾಗಿ ಅಬ್ದುಲ್ ರಹೀಮ್ ಹಾಗೂ ಮೂಸಾ ಹಾಜಿ ಬಸರ, ಟ್ರಾನ್ಸ್‌ಪೋರ್ಟ್ ಚೇರ್‌ಮೆನ್ ಆಗಿ ಮಜೀದ್ ಮಂಜನಾಡಿ ಹಾಗೂ ಕನ್ವೀನರ್‌ರಾಗಿ ಜಮಾಲ್ ಸುಳ್ಯ, ಸ್ವಯಂ ಸೇವಕ ವಿಭಾಗದ ಕನ್ವೀನರ್‌ರಾಗಿ ಇರ್ಷಾದ್ ಕೊಂಡಂಗೇರಿ ಹಾಗೂ ಜೋಯಿನ್ ಕನ್ವೀನರ್‌ರಾಗಿ ಆಸಿಫ್ ಸಜಿಪ, ಆಹಾರ ಸರಬರಾಜು ಚೇರ್‌ಮೆನ್ ಆಗಿ ಖಾಸಿಂ ಮದನಿ ತೆಕ್ಕಾರು ಅವರನ್ನು ನೇಮಿಸಲಾಯಿತು.

ಸಮಾರಂಭಕ್ಕೆ ಆಗಮಿಸಿದ ಗಣ್ಯ ಅತಿಥಿಗಳನ್ನು ಶರೀಫ್ ಹೊಸಾರ್ ಸ್ವಾಗತಿಸಿದರು. ರಫೀಕ್ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು. ಅಬ್ದುರ್ರಶೀದ್ ಪಡೀಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News