×
Ad

ಡಿ.ಕೆ.ಎಸ್.ಸಿ. 20ನೆ ವಾರ್ಷಿಕ ಸಮ್ಮೇಳನ: ಅ.28ರಿಂದ ನ.25ರವರೆಗೆ ಯುಎಇಯಲ್ಲಿ ಪ್ರಚಾರ ಆಂದೋಲನ

Update: 2016-10-26 16:44 IST

ದುಬೈ, ಅ.26: ಗಲ್ಫ್ ಪ್ರವಾಸಿಗಳ ಸುನ್ನಿ ಸಂಘಟನೆ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ (ಡಿ.ಕೆ.ಎಸ್.ಸಿ.) ಅಧೀನದಲ್ಲಿ ಉಡುಪಿ ಜಿಲ್ಲೆಯ ಮೂಳೂರಿನಲ್ಲಿ ಕಾರ್ಯಾಚರಿಸುತ್ತಿರುವ ‘ಅಲ್ ಇಹ್ಸಾನ್ ಎಜುಕೇಶನ್ ಸೆಂಟರ್‌ನ 20ನೆ ವಾರ್ಷಿಕ ಸಮ್ಮೇಳನವು ಡಿ.2, 3 ಮತ್ತು 4ರಂದು ತಾಯ್ನಾಡಿನಲ್ಲಿ ನಡೆಯಲಿದೆ. ಯು.ಎ.ಇ.ಯಲ್ಲಿ ಇದರ ಪ್ರಚಾರಾರ್ಥ ಅಕ್ಟೊಬರ್ 28ರಿಂದ ನವಂಬರ್ 25ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಹಾಜಿ ಮೊಯ್ದಿನ್ ಕುಟ್ಟಿ ಕಕ್ಕಿಂಜೆ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ಡಿ.ಕೆ.ಎಸ್.ಸಿ. ಪ್ರವರ್ತಕರು ಸಹಕರಿಸುವಂತೆ ಡಿ.ಕೆ.ಎಸ್.ಸಿ. ಯು.ಎ.ಇ ರಾಷ್ಟ್ರೀಯ ಸಮಿತಿಯ ಅಧಕ್ಷ ಹುಸೈನ್ ಹಾಜಿ ಕಿನ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News