ರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಚಕ್ರವರ್ತಿ ಸೂಲಿಬೆಲೆ: ಆಹ್ವಾನ ರದ್ದುಪಡಿಸಿದ ಅಬುಧಾಬಿ ಕರ್ನಾಟಕ ಸಂಘ

Update: 2016-10-26 18:00 GMT

ಅಬುಧಾಬಿ, ಅ.26: ಅಬುಧಾಬಿ ಕರ್ನಾಟಕ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಚಕ್ರವರ್ತಿ ಸೂಲಿಬೆಲೆಗೆ ನೀಡಿದ್ದ ಆಹ್ವಾನವನ್ನು ಅಬುಧಾಬಿ ಕರ್ನಾಟಕ ಸಂಘವು ಹಿಂಪಡೆದುಕೊಂಡಿದೆ.

ಅಬುಧಾಬಿ ಕರ್ನಾಟಕ ಸಂಘದ ವತಿಯಿಂದ ನ.4ರಂದು ಅಬುಧಾಬಿಯ ಇಂಡಿಯಾ ಸೋಶಿಯಲ್ ಆ್ಯಂಡ್ ಕಲ್ಚರಲ್ ಸೆಂಟರ್‌ನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಚಕ್ರವರ್ತಿ ಸೂಲಿಬೆಲೆಯನ್ನು ಆಹ್ವಾನಿಸಲಾಗಿತ್ತು. ಆದರೆ ಸಂಘಪರಿವಾರದ ಆಶಯಗಳನ್ನು ಪ್ರತಿಪಾದಿಸುವ ಚಕ್ರವರ್ತಿ ಸೂಲಿಬೆಲೆಯವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವುದಕ್ಕೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ನೀಡಿದ ಆಹ್ವಾನವನ್ನು ಅಬುಧಾಬಿ ಕರ್ನಾಟಕ ಸಂಘ ಹಿಂಪಡೆದುಕೊಂಡಿದೆ. ಇದನ್ನು ಸಂಘದ ಸರ್ವೋತ್ತಮ ಶೆಟ್ಟಿ ಖಚಿತಪಡಿಸಿದ್ದಾರೆ. ಕಾರ್ಯಕ್ರಮದ ಹೊಸ ಪೋಸ್ಟರ್‌ನ್ನು ಕೂಡಾ ಸಂಘ ಬಿಡುಗಡೆ ಮಾಡಿದೆ.

ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಮುಖ್ಯ ಅತಿಥಿಯಾಗಿ ಭಾಗವಹಿಸುವ ಕುರಿತು ಶಶಿಧರ್ ಮಂಡ್ಯ ಎಂಬವರು ಬರೆದ ಲೇಖನ ಮಂಗಳವಾರ 'ವಾರ್ತಾಭಾರತಿ'ಯ ನಿಮ್ಮ ಅಂಕಣ ವಿಭಾಗದಲ್ಲಿ ಪ್ರಕಟಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News