×
Ad

ಜಾಗತಿಕ ಗಣಿತ ಸಂಘಟನೆಯ ಮುಖ್ಯಸ್ಥೆಯಾಗಿ ಸೌದಿ ಮಹಿಳೆ

Update: 2016-10-27 18:53 IST

ರಿಯಾದ್, ಅ. 27: ಗಣಿತ ಕ್ಷೇತ್ರದಲ್ಲಿ ಸಮನ್ವಯ ಸಾಧಿಸಲು ಮುಡುಪಾಗಿರುವ ಅಂತಾರಾಷ್ಟ್ರೀಯ ಸರಕಾರೇತರ ಸಂಘಟನೆ ‘ಇಂಟರ್‌ನ್ಯಾಶನಲ್ ಮ್ಯಾತೆಮೆಟಿಕಲ್ ಯೂನಿಯನ್ (ಐಎಂಯು)ನ ನೂತನ ನಿರ್ದೇಶಕರಾಗಿ ಸೌದಿ ಅರೇಬಿಯದ ಮಾಧ್ಯಮ ಕ್ಷೇತ್ರದ ಮಹಿಳೆ ಸಮೀರಾ ಅಝೀಝ್ ಆಯ್ಕೆಯಾಗಿದ್ದಾರೆ.

158 ದೇಶಗಳನ್ನು ಪ್ರತಿನಿಧಿಸುವ 158 ಅಭ್ಯರ್ಥಿಗಳ ಪೈಕಿ ಅಂತಿಮವಾಗಿ ಸಮೀರಾರನ್ನು ಈ ಸಂಘಟನೆಗೆ ಆಯ್ಕೆ ಮಾಡಲಾಯಿತು. ಅವರ ಅಧಿಕಾರಾವಧಿ ಮೂರು ವರ್ಷಗಳು. ಸೌದಿ ಅರೇಬಿಯದ ನಿಯಮಾವಳಿಗಳಿಗೆ ಅನುಸಾರವಾಗಿ ಕ್ರೀಡಾಕೂಟಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ತಾನು ಯೋಜನೆ ರೂಪಿಸಿರುವುದಾಗಿ ಸಮೀರಾ ಘೋಷಿಸಿದರು.

‘‘ಸಾಮಾಜಿಕ ಸವಾಲುಗಳ ಹೊರತಾಗಿಯೂ, ಸೌದಿ ಅರೇಬಿಯದ ಮಹಿಳೆಯರಿಗೆ ನಾಗರಿಕ ಸಮಾಜದಿಂದ ಪ್ರೋತ್ಸಾಹ ಮತ್ತು ಬೆಂಬಲ ಲಭಿಸುತ್ತಿದೆ. ಸೌದಿ ಸರಕಾರವು ಅವರಿಗೆ ಎಲ್ಲ ಅಗತ್ಯ ನೆರವು ನೀಡುತ್ತಿದೆ. ಮಹಿಳೆಯರು ಪ್ರತಿಭೆ ಹೊಂದಿದ್ದು ಕಠಿಣ ಪರಿಶ್ರಮ ಪಟ್ಟು ಯಶಸ್ಸು ಗಳಿಸಬೇಕಾಗಿರುವುದು ಮುಖ್ಯ’’ ಎಂದು ಅವರು ಹೇಳಿದರು. ಭಾರತದ ಗುಜರಾತ್‌ನಲ್ಲಿ ಈ ಆಯ್ಕೆ ನಡೆಯಿತು.

ಬಾಲಿವುಡ್ ಚಿತ್ರ ನಿರ್ದೇಶಿಸಿದ ಮೊದಲ ಸೌದಿ ಮಹಿಳೆ
ಬಾಲಿವುಡ್‌ನಲ್ಲಿ ಚಿತ್ರ ನಿರ್ದೇಶನ ಮಾಡಿದ ಹಾಗೂ ಚಿತ್ರಕತೆ ಬರೆದ ಮೊದಲ ಸೌದಿ ಮಹಿಳೆ ಸಮೀರಾ ಅಝೀಝ್. ಮಧ್ಯಪ್ರಾಚ್ಯದ ‘ಜಿಆರ್8! ಇನ್ ದುಬೈ’ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಪ್ರಶಸ್ತಿಯೂ ಅವರಿಗೆ ಲಭಿಸಿದೆ.  ಅವರು ಉರ್ದು ಭಾಷೆಯಲ್ಲಿ ಕಾದಂಬರಿ ಬರೆದ ಮೊದಲ ಸೌದಿ ಕಾದಂಬರಿಕಾರರೂ ಹೌದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News