ತಲಾಖ್ ನಿಷೇಧದ ಪ್ರಸ್ತಾಪ ಕ್ರಮ ಖಂಡನೀಯ: ಅಝೀಝ್ ಸಅದಿ

Update: 2016-10-29 04:28 GMT

ಅಲ್ ಹಸ್ಸಾ, ಅ.29: ಕೆ.ಸಿ.ಎಫ್. ಅಲ್ ಹಸ್ಸಾ ವತಿಯಿಂದ ಭಾರತದಲ್ಲಿ ತ್ರಿವಳಿ ತಲಾಖ್ ನಿಷೇಧ ಮತ್ತು ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ವಿಚಾರ ಗೋಷ್ಠಿಯು ಶುಕ್ರವಾರ ಜುಮಾ ನಮಾಝ್ ಬಳಿಕ ಇಲ್ಲಿನ ಹುಫೂಫ್ ಸಅದಿಯಾ ಹಾಲ್ನಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆ.ಸಿ.ಎಫ್. ದಮ್ಮಾಮ್ ಝೋನಲ್ ಅಧ್ಯಕ್ಷ ಅಬ್ದುಲ್ ಅಝೀಝ್ ಸಅದಿ, ಪವಿತ್ರವಾದ ಇಸ್ಲಾಮ್ ಧರ್ಮದ ಆದರ್ಶಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಕೇಂದ್ರ ಬಿಜೆಪಿ ಸರಕಾರದ ಕೋಮುವಾದಿ ಧೋರಣೆಯನ್ನು ಖಂಡಿಸಿದರು.
ಕೆ.ಸಿ.ಎಫ್. ನಾಯಕರಾದ ಝಕರಿಯಾ ಸಅದಿ ಮಾತನಾಡಿದರು.
ಕೆ.ಸಿ.ಎಫ್. ದಮ್ಮಾಮ್, ಅಲ್ ಹಸ್ಸಾ ಕಾರ್ಯಕರ್ತರು ಹಾಗೂ ನಾಯಕರಾದ ಸ್ವಾದಿಕ್ ಕಾಟಿಪಳ್ಳ, ಮುಹಮ್ಮದ್ ಮಲೆಬೆಟ್ಟು, ಅಬ್ದುರ್ರಹ್ಮಾನ್ ಕೈರಂಗಳ ಉಪಸ್ಥಿತರಿದ್ದರು.
ಅಶ್ರು ಬಜ್ಪೆಕಾರ್ಯಕ್ರಮ ನಿರೂಪಿಸಿದರು. ಹಾರಿಸ್ ಕಾಜೂರ್ ಸ್ವಾಗತಿಸಿದರು. ಝಕರಿಯಾ ಸಅದಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News