ದಮ್ಮಾಮ್: ಕೆಸಿಎಫ್‌ನಿಂದ ಶರೀಅತ್ ವಿಚಾರ ಸಂಕಿರಣ

Update: 2016-10-30 18:17 GMT

ದಮ್ಮಾಮ್, ಅ.30: ಕೆಸಿಎಫ್ ದಮ್ಮಾಮ್ ಸೆಕ್ಟರ್ ವತಿಯಿಂದ ನಡೆದ ಶರೀಅತ್ ವಿಚಾರ ಸಂಕಿರಣ ಕಾರ್ಯಕ್ರಮವು ಇತ್ತೀಚೆಗೆ ಸಅದಿಯಾ ಹಾಲ್ ನಲ್ಲಿ ಜರುಗಿತು.

ಕೆಸಿಎಫ್ ರಾಷ್ಟ್ರೀಯ ಸಮಿತಿ ಆಯೋಜಿಸಿದ ವಿಶೇಷ ಚರ್ಚಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಬೀಬ್ ಸಖಾಫಿ ದುಆ ನೆರವೇರಿಸಿದರು. ಬಶೀರ್ ಉಸ್ತಾದ್ ಕಾಪು ಉದ್ಘಾಟಿಸಿದರು. ಶರೀಅತ್ ವಿಚಾರ ಸಂಕಿರಣದಲ್ಲಿ ಸರಕಾರದ ಹಸ್ತಕ್ಷೇಪ ವಿಚಾರದಲ್ಲಿ ಆಸೀಫ್ ಕಿನ್ನಿಗೋಳಿ ಹಾಗೂ ನೌಶಾದ್ ತಲಪಾಡಿ ಚರ್ಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆಸಿಎಫ್ ಸೌದಿ ಪ್ರಧಾನ ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳ, ಮುಸ್ಲಿಮರಲ್ಲಿ ಶರೀಅತ್ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಅದರ ವಿಚಾರದಲ್ಲಿ ಯಾರೇ ಮೂಗು ತೂರಿಸಲು ಬಂದಲ್ಲಿ ಕೆಸಿಎಫ್ ಯಾವತ್ತೂ ಅದನ್ನು ವಿರೋಧಿಸಲಿದೆ. ದೇಶದಲ್ಲಿ ನಡೆಯುವ ಸುನ್ನಿ ಒಕ್ಕೂಟಗಳ ಎಲ್ಲಾ ಪ್ರತಿಭಟನೆಗಳಿಗೆ ಕೆಸಿಎಫ್ ಸೌದಿ ಅರೇಬಿಯಾ ತನ್ನ ಸಂಪೂರ್ಣ ಬೆಂಬಲವನ್ನು ಸೂಚಿಸುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಝೋನ್ಮುಖಂಡರಾದ ಫಾರೂಕ್ ಕುಪ್ಪೆಟ್ಟಿ, ಫೈಝಲ್ ಕೃಷ್ಣಾಪುರ, ಶಫೀಕ್ ಕಾಟಿಪಳ್ಳ ಉಪಸ್ಥಿತರಿದ್ದರು. ನಾಸಿರ್ ಎಚ್.ಕಲ್ಲು ಸ್ವಾಗತಿಸಿ, ಸೀಕೋ ಯೂನಿಟ್ ಪ್ರಧಾನ ಕಾರ್ಯದರ್ಶಿ ಸಮದ್ ಹೊಸಂಗಡಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News