×
Ad

ಸೌದಿಅರೇಬಿಯ: ಅಪಘಾತದಲ್ಲಿ ಗಾಯಗೊಂಡಿದ್ದ ಭಾರತದ ಯುವಕ ನಿಧನ

Update: 2016-10-31 16:27 IST

ಖಮೀಸ್ಮುಸೈತ್ , ಅ. 31: ವಾಹನಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕೇರಳ ಮಂಜೇರಿ ಎಂಬಲ್ಲಿನ ಬಷೀರ್(28) ಚಿಕಿತ್ಸೆಫಲಕಾರಿಯಾಗದೆ ನಿಧನರಾಗಿದ್ದಾರೆಂದು ವರದಿಯಾಗಿದೆ. ಖಮೀಸ್ಮುಸೈತ್ ನೀರುಸರಬರಾಜು ಕಂಪೆನಿಯಲ್ಲಿ ಬಷೀರ್ ಉದ್ಯೋಗಿಯಾಗಿದ್ದರು. ಕಂಪೆನಿ ಗೋಡೌನ್‌ನಲ್ಲಿ ನೀರಿನಕ್ಯಾನ್‌ಗಳನ್ನು ವಾಹನಕ್ಕೆ ಲೋಡ್ ಮಾಡುವ ವೇಳೆ ಸ್ವದೇಶಿಯೊಬ್ಬ(ಸೌದಿಪ್ರಜೆ) ಚಲಾಯಿಸಿಕೊಂಡು ಬಂದ ವಾಹನ ಬಷೀರ್‌ಗೆ ಢಿಕ್ಕಿಯಾಗಿತ್ತು. ಢಿಕ್ಕಿಯ ರಭಸಕ್ಕೆ ಬಷೀರ್ ಐವತ್ತು ಮೀಟರ್ ದೂರಕ್ಕೆ ಎಸೆಲ್ಪಟ್ಟಿದ್ದರು ಎನ್ನಲಾಗಿದೆ. ನಂತರ ಅವರನ್ನು ಅಲ್‌ಹಯಾತ್ ಆಸ್ಪತ್ರೆಗೆ ಸೇರಿಸಲಾಗಿತ್ತು. ವಾಹನದ ನಿಯಂತ್ರಣ ಕಳಕೊಂಡು ಅಪಘಾತಕ್ಕೆ ಕಾರಣವಾಗಿತ್ತು. ಚಾಲಕನಿಗೂ ಗಂಭೀರಗಾಯವಾಗಿದ್ದು ಆತನಿನ್ನೂ ಚೇತರಿಸಿಲ್ಲ ಎನ್ನಲಾಗಿದೆ. ಬಶೀರ್ ಶನಿವಾರ ಚಿಕಿತ್ಸೆಗೆ ಸ್ಪಂದಿಸದೆ ಮೃತರಾಗಿದ್ದಾರೆ. ಸೌದಿ ಅರೇಬಿಯಕ್ಕೆ ಬಂದು ಕೇವಲ ಒಂದುವರ್ಷ ಮಾತ್ರ ಆಗಿತ್ತು. ಖಮೀಸ್‌ನಲ್ಲಿಯೇ ಅವರ ಶವಸಂಸ್ಕಾರ ಕಾರ್ಯ ನಡೆಯಲಿದೆ ಎಂದು ಅವರ ಗೆಳೆಯ ಮಿಶಾಲ್ ತಿಳಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News