ಐಎಸ್‌ಎಫ್‌ನಿಂದ ಟಿಪ್ಪು ಜಯಂತಿ ಪ್ರಯುಕ್ತ ಟಿಪ್ಪು ಸಂದೇಶ ಕವನ ಸ್ಪರ್ಧೆ
Update: 2016-11-02 19:57 IST
ದಮ್ಮಾಮ್, ನ.2: ಭೂಸುಧಾರಣೆಯ ಹರಿಕಾರ, ಸಾಮಾಜಿಕ ನ್ಯಾಯದ ಸಂದೇಶವನ್ನು ಸಾರಿದ ಅರಸ ಟಿಪ್ಪುವಿನ ಬದುಕು, ಸಂದೇಶದ ಕುರಿತು ಯುವಪೀಳಿಗೆ, ಅದರಲ್ಲೂ ಅನಿವಾಸಿ ಯುವಕರಲ್ಲಿ ಜಾಗೃತಿ ಮೂಡಿಸುವ ಆಶಯದೊಂದಿಗೆ ಇಂಡಿಯನ್ ಸೋಷಿಯಲ್ ಫಾರಂ ಟಿಪ್ಪುಜಯಂತಿ ಪ್ರಯುಕ್ತ ಅನಿವಾಸಿ ಭಾರತೀಯರಿಗೆ ಕವನ ಸ್ಪರ್ಧೆಯನ್ನು ಏರ್ಪಡಿಸಿದೆ.
ಕಳುಹಿಸುವ ಕವನಗಳು ಟಿಪ್ಪುವಿನ ಸಂದೇಶವನ್ನು ಸಾರುವಂತಿರಬೇಕು. ಕವನಗಳನ್ನು ನ.7ರ ಒಳಗೆ ತಲುಪುವಂತೆ ಮೊ.ಸಂ.:+966531274877 ಅಥವಾ ಇಮೇಲ್:isfdammam.karnataka@gmail.comಗೆ ಕಳುಹಿಸಬಹುದು. ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಿ ಗೌರವಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.