×
Ad

ದುಬೈ: ನ.11ರಂದು ಡಿ.ಕೆ.ಎಸ್.ಸಿ. 20ನೆ ವಾರ್ಷಿಕ ಸಮ್ಮೇಳನದ ಪ್ರಚಾರ ಸಭೆ

Update: 2016-11-03 15:41 IST

ದುಬೈ, ನ.3: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್(ಡಿ.ಕೆ.ಎಸ್.ಸಿ.)ನ 20ನೆ ವಾರ್ಷಿಕ ಸಮ್ಮೇಳನವು ಮೂಳೂರಿನ ಮರ್ಕಝ್ ಕ್ಯಾಂಪಸ್‌ನಲ್ಲಿ ಡಿ.2, 3 ಮತ್ತು 4ರಂದು 20 ಜೋಡಿ ಬಡ ಕುಟುಂಬಗಳ ಸಾಮೂಹಿಕ ವಿವಾಹ ಹಾಗೂ ವಿವಿಧ ಜನೋಪಯೋಗಿ ಅಭಿವೃದ್ಧಿ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇದರ ಪ್ರಚಾರಾಂದೋಲನವು ಗಲ್ಫ್ ರಾಷ್ಟ್ರಗಳ ನಡೆಯುತ್ತಿದ್ದು, ಇದರ ಅಂಗವಾಗಿ ಡಿ.ಕೆ.ಎಸ್.ಸಿ. ಯು.ಎ.ಇ. ರಾಷ್ಟ್ರೀಯ ಸಮಿತಿಯ ಅಧೀನದ ದುಬೈಯ ದೇರಾ ಯುನಿಟ್, ಬಾರ್‌ದುಬೈ ಯುನಿಟ್, ಅಲ್ ಕ್ವಿಸಸ್ ಯುನಿಟ್ ಹಾಗೂ ಯೂತ್ ವಿಂಗ್ ಯುನಿಟ್‌ನ ಸಂಯುಕ್ತ ಆಶ್ರಯದಲ್ಲಿ ನ.11ರಂದು ಬೃಹತ್ ಪ್ರಚಾರ ಸಭೆ ಹಾಗೂ ಹಿತೈಷಿಗಳ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮವು ಅಂದು ಸಂಜೆ 6 ಗಂಟೆಗೆ ದೇರಾ ಬನಿಯಾಸ್‌ನಲ್ಲಿರುವ ಪರ್ಲ್ ಕ್ರೀಕ್ ಹೋಟೆಲ್‌ನಲ್ಲಿ ನಡೆಯಲಿದೆ. ಕಾರ್ಯಕ್ರಮದ ಯಶಸ್ಸಿಯಾಗಿ ನಡೆಸಲು ಎಂ.ಇ.ಮೂಳೂರು ನೇತೃತ್ವದಲ್ಲಿ ಜಂಟಿ ಯುನಿಟ್‌ಗಳನ್ನು ರಚಿಸಲು ನಿರ್ಧರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News