ಸೌದೀಕರಣದತ್ತ ಇನ್ನೊಂದು ಪ್ರಮುಖ ಕ್ಷೇತ್ರ

Update: 2016-11-05 09:54 GMT

ರಿಯಾದ್,ನ. 5: ಕಾರ್ಮಿಕ ಸಚಿವಾಲಯ ವಿವಿಧ ಕ್ಷೇತ್ರಗಳಲ್ಲಿ ಜಾರಿಗೆ ತರುತ್ತಿರುವ ಸ್ವದೇಶೀಕರಣ ಭಾರತೀಯರ ಸಹಿತ ಹಲವಾರು ವಿದೇಶಿಗಳು ದುಡಿಯುತ್ತಿರುವ ಫಾರ್ಮಸಿಗಳತ್ತ ವ್ಯಾಪಿಸಿಕೊಳ್ಲುತ್ತಿದೆ ಎಂದು ವರದಿಯಾಗಿದೆ. ಫಾರ್ಮಸಿ, ಕನ್ನಡಕದ ಅಂಗಡಿಗಳು, ಪ್ರಕೃತಿಚಿಕಿತ್ಸೆ ಔಷಧ ಅಂಗಡಿಗಳಲ್ಲಿ ಕೂಡಾ ಸ್ವದೇಶಿ ಮಹಿಳೆಯರನ್ನು ನೇಮಿಸಲು ಆರೋಗ್ಯಸಚಿವಾಲಯ ಬಯಸಿದೆ.

ಫಾರ್ಮಸಿ ಪದವಿ ಹೊಂದಿರುವ ಮಹಿಳೆಯರು ಆರೋಗ್ಯಸಚಿವಾಲಯ ನೀಡುವ ಲೈಸನ್ಸ್ ಉಪಯೋಗಿಸಿ ನಗರಗಳ ಶಾಪಿಂಗ್ ಮಾಲ್‌ಗಳೊಳಗೆ ಇರುವ ಫಾರ್ಮಸಿಗಳಲ್ಲಿ ಮತ್ತು ಅಂಗಡಿಗಳಲ್ಲಿ ಕೆಲಸ ಮಾಡಬಹುದೆಂದು ಅಧಿಕಾರಿಗಳು ಹೇಳಿದ್ದಾರೆ. ಮಹಿಳಾ ಉದ್ಯೋಗಿಗಳಿಗೆ ನೀಡಲಾಗಿರುವ ಸೌಲಭ್ಯಗಳು ಮಾನದಂಡಗಳನ್ನು ಪಾಲಿಸುವುದು ಖಚಿತವಾದ ಮೇಲೆಯೇ ನೇಮಕಾತಿ ನಡೆಯಲಿದೆ.

ಈ ರೀತಿ ಆಯ್ಕೆಮಾಡಲಾಗುವ ಫಾರ್ಮಸಿಗಳಲ್ಲಿ ಮಹಿಳಾ ಉದ್ಯೋಗಿಗಳು ಮಾತ್ರ ಇರುತ್ತಾರೆ ಎಂದು ಸಚಿವಾಲಯದ ಮೂಲಗಳುತಿಳಿಸಿವೆ. 47,000ಕ್ಕೂ ಅಧಿಕ ಫಾರ್ಮಸಿಸ್ಟ್‌ಗಳು ಸೌದಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸೌದಿ ಚೇಂಬರ್ ಕೌನ್ಸಿಲ್‌ಹೇಳಿದೆ. ಅದರ ಪ್ರಕಾರ ಈ ಕ್ಷೇತ್ರದಲ್ಲಿ ಕೇವಲ 8,000 ಮಂದಿ ಸ್ವದೇಶಿಗಳು ಕೆಲಸಮಾಡುತ್ತಿದ್ದಾರೆ. ಉಳಿದ 39,000 ಮಂದಿ ವಿದೇಶಿಗಳಾಗಿದ್ದಾರೆ.ಇವರ ಸ್ಥಾನದಲ್ಲಿ ಸ್ವದೇಶಿಗಳನ್ನು ನೇಮಿಸಲು ಕಾರ್ಮಿಕ, ಆರೋಗ್ಯಸಚಿವಾಲಯ ನಿರ್ಧರಿಸಿವೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News