×
Ad

ಸೌದಿ: ಅತ್ಯಾಚಾರಿಗಳಿಗೆ 52 ವರ್ಷ ಜೈಲು, 7,000 ಛಡಿ ಏಟು

Update: 2016-11-07 19:58 IST

ಮನಾಮ, ನ. 7: ಗಂಡ ಮತ್ತು ಚಿಕ್ಕ ಮಗಳ ಎದುರಲ್ಲೇ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ನಾಲ್ವರಿಗೆ ಸೌದಿ ಅರೇಬಿಯದ ನ್ಯಾಯಾಲಯವೊಂದು 52 ವರ್ಷಗಳ ಜೈಲುವಾಸ ಶಿಕ್ಷೆ ವಿಧಿಸಿದೆ.

ಅದೇ ವೇಳೆ, ಜಿದ್ದಾದ ನ್ಯಾಯಾಲಯವು ನಾಲ್ವರು ಅತ್ಯಾಚಾರಿಗಳಿಗೆ 7,000 ಛಡಿಏಟಿನ ಶಿಕ್ಷೆಯನ್ನೂ ನೀಡಿದೆ.ಅತ್ಯಾಚಾರಿಗಳ ಪೈಕಿ ಮೂವರು ಸೌದಿ ಅರೇಬಿಯನ್ನರು ಮತ್ತು ಓರ್ವ ಸುಡಾನ್ ಪ್ರಜೆ.

ಮೊದಲ ಅಪರಾಧಿ 17 ವರ್ಷದ ಸೌದಿ ಪ್ರಜೆಗೆ ನ್ಯಾಯಾಲಯವು 17 ವರ್ಷಗಳ ಜೈಲು ಮತ್ತು 2,500 ಛಡಿ ಏಟಿನ ಶಿಕ್ಷೆ ನೀಡಿತು. ಛಡಿ ಏಟಿನ ಶಿಕ್ಷೆಯನ್ನು 50 ಹಂತಗಳಲ್ಲಿ ನೀಡಬೇಕಾಗಿದೆ.

ಎರಡನೆ ಮತ್ತು ಮೂರನೆ ಅಪರಾಧಿಗಳಿಗೆ ತಲಾ 15 ವರ್ಷ ಜೈಲು ಮತ್ತು ತಲಾ 1,500 ಛಡಿ ಏಟಿನ ಶಿಕ್ಷೆಯನ್ನು ನ್ಯಾಯಾಲಯ ಘೋಷಿಸಿತು. ಛಡಿ ಏಟುಗಳನ್ನು 30 ಹಂತಗಳಲ್ಲಿ ನೀಡಬೇಕಾಗಿದೆ ಎಂದು ಸೌದಿ ದೈನಿಕ ‘ಅಲ್ ರಿಯಾದ್’ ಸೋಮವಾರ ವರದಿ ಮಾಡಿದೆ.

ನಾಲ್ಕನೆ ಅಪರಾಧಿಗೆ ಐದು ವರ್ಷಗಳ ಜೈಲು ವಿಧಿಸಿರುವ ನ್ಯಾಯಾಲಯ, 1,500 ಛಡಿ ಏಟು ನೀಡಬೇಕೆಂದು ಆದೇಶ ನೀಡಿದೆ.
ಅಪರಾಧಿಗಳು ವಿದೇಶಿ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿ ಅಲ್ಲಿದ್ದ ಪುರುಷನನ್ನು ಕಟ್ಟಿಹಾಕಿದರು. ಬಳಿಕ ಆತನ ಹೆಂಡತಿಯ ಮೇಲೆ ಆತನ ಎದುರಲ್ಲೇ ಅತ್ಯಾಚಾರ ಎಸಗಿದರು ಹಾಗೂ 10,000 ಸೌದಿ ರಿಯಾಲ್ ಮತ್ತು ಎಂಟು ಮೊಬೈಲ್ ಫೋನ್‌ಗಳನ್ನು ಕದ್ದರು ಎಂದು ಪ್ರಾಸಿಕ್ಯೂಶನ್ ಆರೋಪಿಸಿದೆ.
ಇದೇ ವ್ಯಕ್ತಿಗಳು ಮೊತ್ತೊಮ್ಮೆ ಚೂರಿ ಝಳಪಿಸುತ್ತಾ ಮನೆಗೆ ನುಗ್ಗಿ ಅದೇ ಮಹಿಳೆಯನ್ನು ಮತ್ತೊಮ್ಮೆ ಅತ್ಯಾಚಾರ ಮಾಡಿದರು ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News