ಮನಾಮ: ಡಿ.2ರಂದು ‘ಇಲಲ್ ಹಬೀಬ್ ಮೀಲಾದ್ ಸಮಾವೇಶ’
Update: 2016-11-08 16:14 IST
ಬಹರೈನ್, ನ.8: ಅನಿವಾಸಿ ಕನ್ನಡಿಗರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ಬಹರೈನ್ ಇದರ ವತಿಯಿಂದ ’ಪ್ರೀತಿಯ ಪ್ರವಾದಿ ಶಾಂತಿಯ ಹಾದಿ’ ಎಂಬ ಘೋಷ ವಾಕ್ಯದೊಂದಿಗೆ ‘ಇಲಲ್ ಹಬೀಬ್’ ಎಂಬ ಶೀರ್ಷಿಕೆಯಡಿಯಲ್ಲಿ ಮೀಲಾದ್ ಸಮಾವೇಶವು ಡಿಸೆಂಬರ್ 2ರಂದು ಸಂಜೆ 7ಕ್ಕೆ ಮನಾಮದಲ್ಲಿ ನಡೆಯಲಿದೆ.
ಮುಖ್ಯ ಅತಿಥಿಯಾಗಿ ಖಾಝಿ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರ ಭಾಗವಹಿಸುವರು. ಮುಖ್ಯ ಭಾಷಣಗಾರರಾಗಿ ಅಬ್ದುಲ್ಲತೀಫ್ ಸಅದಿ ಪಯಸ್ವಿ ಪಾಲ್ಗೊಳ್ಳುವರು ಘಟಕದ ಅಧ್ಯಕ್ಷ ಫಾರೂಕ್ ಎಸ್.ಎಂ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.