ದುಬೈ: ದಾರುನ್ನೂರ್ ಕೇಂದ್ರ ಸಮಿತಿ ಪ್ರಮುಖರಿಗೆ ಸನ್ಮಾನ

Update: 2016-11-13 18:19 GMT

ದುಬೈ, ನ.13: ದಾರುನ್ನೂರ್ ಕಲ್ಚರಲ್ ಸೆಂಟರ್ ಯುಎಇ ಇದರ ವತಿಯಿಂದ ದುಬೈಗೆ ಆಗಮಿಸಿರುವ ದಾರುನ್ನೂರ್ ಕೇಂದ್ರ ಸಮಿತಿ ಪ್ರಮುಖ, ನೂತನ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ, ಅಬ್ದುಲ್ಲತೀಫ್ ಹಾಜಿ ಮದರ್ ಇಂಡಿಯಾ ತೋಡಾರ್ ಮತ್ತು ದಾರುನ್ನೂರ್ ಕೇಂದ್ರ ಸಮಿತಿ ಸದಸ್ಯ, ಸಿವಿಲ್ ಕಾಂಟ್ರಾಕ್ಟರ್ ಮುಸ್ತಾಫಾ ಎಸ್.ಎಂ.ರಿಗೆ ಸನ್ಮಾನ ಕಾರ್ಯಕ್ರಮ ದೇರಾ ರಾಫಿ ಹೋಟೆಲ್ ಆಡಿಟೋರಿಯಂನಲ್ಲಿ ಸನ್ಮಾನಿಸಲಾಯಿತು.

ದಾರುನ್ನೂರ್ ಯುಎಇ ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಹೆಂತಾರ್ ಅತಿಥಿಗಳನ್ನು ಪರಿಚಯಿಸಿದರು. ಬಳಿಕ ಅಬ್ದುಲ್ ಲತೀಫ್ ಹಾಜಿ, ಮುಸ್ತಫಾ ಎಸ್.ಎಂ.ರನ್ನು ದಾರುನ್ನೂರ್ ರಾಷ್ಟ್ರೀಯ ಸಮಿತಿ ಪ್ರಮುಖರು ಶಾಲು ಹೊದಿಸಿ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅಬ್ದುಲ್ಲತೀಫ್ ಹಾಜಿ ಮದರ್ ಇಂಡಿಯಾ, ದಾರುನ್ನೂರಿನಲ್ಲಿ ಸೇವೆ ಸಲ್ಲಿಸಲು ಅಲ್ಲಾಹನು ನಮಗೆ ನೀಡಿದ ಒಂದು ಮಹಾ ಭಾಗ್ಯವಾಗಿರುತ್ತದೆ. ಅಧಿಕಾರಕ್ಕಿಂತ ಒಬ್ಬ ಸಾಮಾನ್ಯ ಸದಸ್ಯನಾಗಿ ಅದರ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವುದು ನಮಗೆ ಸಂತೋಷ ನೀಡುವ ಸಂಗತಿಯಾಗಿದೆ.ಶೈಖುನಾ ತ್ವಾಕ ಉಸ್ತಾದರ ದುಆದಂತೆ ಒಳಿತನ್ನು ಹಾರೈಸುವ ಜನರನ್ನು ದಾರುನ್ನೂರಿನ ಕಡೆಗೆ ಅಲ್ಲಾಹನು ಕಳುಹಿಸಲಿ ಎಂದು ಶುಭಹಾರೈಸಿದರು.

ಬಳಿಕ ಮಾತನಾಡಿದ ಮುಸ್ತಫಾ, ತಾನು ಹೆಚ್ಚಾಗಿ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸುವ ಹವ್ಯಾಸ ಹೊಂದಿದ್ದು, ಹಲವಾರು ಆಂಗ್ಲ ಮಾದ್ಯಮ ಶಾಲೆಗಳ ಮಕ್ಕಳ ಸಾಮಾನ್ಯ ಜ್ಞಾನ ಮತ್ತು ದಾರುನ್ನೂರಿನಲ್ಲಿ ಕಲಿಯುವ ಮಕ್ಕಳ ಸಾಮಾನ್ಯ ಜ್ಞಾನ ವನ್ನು ತುಲನೆ ಮಾಡಿದಾಗ ಉತ್ತಮ ರೀತಿಯ ಫಲಿತಾಂಶ ದಾರುನ್ನೂರಿನ ಮಕ್ಕಳಲ್ಲಿ ಕಂಡು ಬಂದಿದೆ. ಇದಕ್ಕೆ ಮುಖ್ಯ ಕಾರಣ ಅಲ್ಲಿಯ ಅಧ್ಯಾಪಕರ ಆಳವಾದ ಅನುಭವ ಸಂಪತ್ತು ಎಂದು ಅಭಿಪ್ರಾಯಪಟ್ಟರು.

ದಾರುನ್ನೂರ್ ಅಬುಧಾಬಿ ಝೋನಲ್ ಅಧ್ಯಕ್ಷ ರವೂಫ್ ಹಾಜಿ ಕೈಕಂಬ ಮಾತನಾಡಿದರು. ಅಧ್ಯಕ್ಷೀಯ ಭಾಷಣಗೈದ ಸಂಶುದ್ದೀನ್ ಸೂರಲ್ಪಾಡಿ ದಾರುನ್ನೂರಿನ ಮಹತ್ವವನ್ನು ವಿವರಿಸಿದರು. ಕೇಂದ್ರ ಸಮಿತಿಯಲ್ಲಿ ಹಲವು ಮುತ್ಸದ್ಧಿಗಳಿದ್ದು ಇದು ದಾರುನ್ನೂರಿನ ವಿಶೇಷತೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ದಾರುನ್ನೂರ್ ವತಿಯಿಂದ ನಡೆಯಲಿರುವ ಬೃಹತ್ ಮೀಲಾದ್ ದಿನಾಚರಣೆಯ ಸ್ವಾಗತ ಸಮಿತಿಯ ಚೇರ್ಮೇನ್ ಮಹಮ್ಮದ್ ರಫೀಕ್ ಆತೂರ್ ಮತ್ತು ಕಾರ್ಯದರ್ಶಿ ಅಬ್ದುಲ್ ನಾಸಿರ್ ಮಂಗಿಲ ಪದವು ಮೀಲಾದ್ ಆಚರಣೆಯ ವಿಶೇಷತೆಯನ್ನು ವಿವರಿಸಿ ಮಗರಿಬ್ ನಮಾಝಿನ ಬಳಿಕ ಆರಂಭಿಸಿ ರಾತ್ರಿ 1 ಗಂಟೆಗೆ ಮುಂಚಿತವಾಗಿ ಕಾರ್ಯಕ್ರಮವನ್ನು ಮುಗಿಸುವ ಎಲ್ಲಾ ಸಿದ್ಧತೆಗಳನ್ನು ಸಂಯೋಜಿಸಲಾಗಿದೆ. ರಾಫಿ ಹೋಟೆಲ್ ಆಡಿಟೋರಿಯಂನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶ ಮಾಡಲಾಗಿದೆ ಎಂದು ವಿವರಿಸಿದರು. ಮೌಲಿದ್ ಪಾರಾಯಣ, ಬುರ್ದಾ ಮಜ್ಲಿಸ್ ಮತ್ತು ಮಜ್ಲಿಸುನ್ನೂರ್ ನಡೆಯಲಿವೆ. ದಾರುನ್ನೂರ್ ಉಪದೇಶಕ ಉಸ್ತಾದ್ ಶೌಕತ್ ಅಲಿ ಹುದವಿಯವರಿಂದ ಪ್ರಭಾಷಣ ನಡೆಯಲಿದೆ ಎಂದು ಈ ಸಂದರ್ಭ ವಿವರಿಸಿದರು.

ವೇದಿಕೆಯಲ್ಲಿ ದಾರುನ್ನೂರ್ ಅಬುಧಾಬಿ ಝೋನಲ್ ಪ್ರೆಸಿಡೆಂಟ್ ರವೂಫ್ ಹಾಜಿ ಕೈಕಂಬ, ಉಸ್ತಾದ್ ಯೂಸುಫ್ ಹುದವಿ, ದಾರುನ್ನೂರ್ ಯುಎಇ ಉಪಾಧ್ಯಕ್ಷ ಮುಹಮ್ಮದ್ ಮಾಡಾವು, ದಾರುನ್ನೂರ್ ಯುಎಇ ಧಾರ್ಮಿಕ ಸಲಹೆಗಾರ ಅಬ್ದುರ್ರಝಾಕ್ ಉಸ್ತಾದ್ ಪಾತೂರು ಮೊದಲಾದವರು ಉಪಸ್ಥಿತರಿದ್ದರು.

ದಾರುನ್ನೂರ್ ಯುಎಇ ಉಪಾಧ್ಯಕ್ಷ ಶಂಶುದ್ದೀನ್ ಸೂರಲ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ದಾರುನ್ನೂರ್ ಅಲ್ ನಹ್ದಾ ಶಾಖೆಯ ಉಪದೇಶಕ ಉಸ್ತಾದ್ ಯೂಸುಫ್ ಹುದವಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಸ್ತಾದ್ ಅಶ್ರಫ್ ಪರಪ್ಪದುಆ ನೆರವೇರಿಸಿದರು.  ದಾರುನ್ನೂರ್ ಯುಎಇ ಕಾರ್ಯದರ್ಶಿ ಅಬ್ದುರ್ರಝಾಕ್ ಕಾರಾಯಿ ಸ್ವಾಗತಿಸಿದರು.  ದಾರುನ್ನೂರ್ ಯುಎಇ ಕಾರ್ಯದರ್ಶಿ ಅಶ್ರಫ್ ಪರ್ಲಡ್ಕ ವಂದಿಸಿದರು. 

ಅಬ್ದುಲ್ ಸಲಾಂ ಬಪ್ಪಳಿಗೆ, ಸಮೀರ್ ಇಬ್ರಾಹೀಂ ಕಲ್ಲರೆ, ಮುಹಮ್ಮದ್ ರಫೀಕ್ ಸುರತ್ಕಲ್, ಮುಸ್ತಾಕ್ ಮುಹಮ್ಮದ್ ತೋಡಾರ್, ಹಮೀದ್ ಮನಿಲ, ಇಲ್ಯಾಸ್ ಕಡಬ, ಉಸ್ಮಾನ್ ಕೆಮ್ಮಿಂಜೆ, ನವಾಝ್ ಬಿ.ಸಿ ರೋಡ್, ಹನೀಫ್ ಕೆ. ಮೂಡುಬಿದಿರೆ, ಅಬ್ದುಲ್ ರಹ್ಮಾನ್ ಬಾಳಿಯೂರ್ , ಸುಲೈಮಾನ್ ಗಡಿಯಾರ್, ಅನ್ಸಾಫ್ ಪಾತೂರ್, ಬಷೀರ್ ಕೆಮ್ಮಿಂಜೆ, ಶಾಕಿರ್ ಕುಪ್ಪೆಪದವು ಮೊದಲಾದವರು ಸಹಕರಿಸಿದ್ದರು. 

ರದಿ: ಬದ್ರುದ್ದೀನ್ ಹೆಂತಾರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News