ದುಬೈ: ಬಿಸಿಎಫ್‌ಯಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಸನ್ಮಾನ
Update: 2016-11-14 10:39 IST
ದುಬೈ, ನ.14: ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಇತ್ತೀಚೆಗೆ ದುಬೈಯ ಪ್ರಸಿದ್ಧ ಹೋಟೆಲ್ ಫೋರ್ನ್ ಪ್ಲಾಝಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಬ್ಯಾರೀಸ್ ಕಲ್ಚರಲ್ ಫೋರಮ್(ಬಿಸಿಎಫ್) ವತಿಯಿಂದ ಸನ್ಮಾನಿಸಲಾಯಿತು.
ದುಬೈಗೆ ಭೇಟಿ ನೀಡಿದ್ದ ಹಾಲಾಡಿಯವರನ್ನು ಉದ್ಯಮಿ, ಫೋರ್ಚುನ್ ಗ್ರೂಪ್ ಆಫ್ ಹೋಟೆಲ್ಸ್ ಮಾಲಕ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ನಡೆದ ಸನ್ಮಾನ ಸಭೆಯಲ್ಲಿ ದುಬೈಯ ಹಲವಾರು ಕನ್ನಡ ಪರ ಸಂಘ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು.
ಬಿಸಿಎಫ್ ಪರವಾಗಿ ಹಾಲಾಡಿಯವರನ್ನು ಸಂಸ್ಥೆಯ ಉಪಾಧ್ಯಕ್ಷರಾದ ಎಂ.ಇ.ಮೂಳೂರು, ಅಬ್ದುಲ್ಲತೀಫ್‌ಮುಲ್ಕಿ, ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮುಹಮ್ಮದ್ ಸ್ಮರಣ ಫಲಕ ನೀಡಿ ಗೌರವಿಸಿದರು.