×
Ad

ಈ ಕ್ರಿಕೆಟ್ ತಂಡದಲ್ಲಿ ತಂದೆ, ಮಗ ಆರಂಭಿಕ ದಾಂಡಿಗರು !

Update: 2016-11-15 16:32 IST

ಮಸ್ಕತ್, ನ. 15: ಒಮನ್ ಕ್ರಿಕೆಟ್ ಲೀಗ್ ಎ ಡಿವಿಷನ್‌ನಲ್ಲಿ ಆಡುತ್ತಿರುವ ಎನ್‌ಹಾನ್ಸ್ ಈಗಲ್ಸ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮೆನ್‌ಗಳಾಗಿ ಕೇರಳದ ತಂದೆಮಗ ಇನಿಂಗ್ಸ್ ಆರಂಭಿಸಲಿದ್ದಾರೆಂದು ವರದಿಯಾಗಿದೆ. ಹಲವು ವರ್ಷಗಳಿಂದ ಒಮನ್‌ನಲ್ಲಿ ಕೆಲಸ ಮಾಡುತ್ತಿರುವ ತೃಶೂರಿನ ಜೈಸನ್ ಮಂಜೀಲ ಮತ್ತು ಅವರ ಪುತ್ರ ಐವನ್ ಮಂಜೀಲ ಈ ಸಾಧನೆಗೆ ಪಾತ್ರರಾದ ತಂದೆ ಮಗನ ಜೋಡಿಯಾಗಿದೆ. ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಒಯುಡಿ ಟ್ರಾವಲ್ಸ್‌ನೊಂದಿಗೆ ಸೋಲನುಭವಿಸಿದರೂ 61ರನ್ ಗಳಿಸಿದ ಜೈಸನ್ ಟಾಪ್ ಸ್ಕೋರರ್ ಎನಿಸಿಕೊಂಡಿದ್ದಾರೆ. ಎರಡನೆ ವಿಕೆಟ್‌ಗೆ ತಂದೆ ಮಗ ಸೇರಿ ಗಳಿಸಿದ 58ರನ್ ಇನಿಂಗ್ಸ್ನ ಅತ್ಯಧಿಕ ಪಾರ್ಟನರ್‌ಶಿಪ್, ನ್ಯಾಶನಲ್ ಯೂತ್ ಡೆವಲಪ್‌ಮೆಂಟ್ ತಂಡದೊಂದಿಗೆ ಕಳೆದ ತಿಂಗಳು ನಡೆದ ಎನ್‌ಹಾನ್ಸ್‌ನ ಪ್ರಥಮ ಪಂದ್ಯದಲ್ಲಿ ತಂದೆ, ಮಗನ ಜೋಡಿ ಇನ್ನಿಂಗ್ ಆರಂಭಿಸಿತ್ತು. 1994ರಿಂದ ಒಮನ್ ಲೀಗ್‌ನಲ್ಲಿ ಆಡುತ್ತಿರುವ ಜೈಸನ್ ಮಂಜೀಲ ಕ್ಯಾಲಿಕಟ್ ಯುನಿವರ್ಸಿಟಿಗೂ ಕೇರಳ ಅಂಡರ್ 15, ಅಂಡರ್ 22, ಅಂಡರ್ 25 ಗಾಗಿ ಪ್ಯಾಡ್ ಕಟ್ಟಿದ್ದರು. ವಾದಿ ಕಬೀರ್ ಶಾಲೆಗಾಗಿ ಆಟ ಆರಂಭಿಸಿದ ಐವನ್ ಮಂಜೀಲ ಒಮನ್ ಅಂಡರ್ 16, ಅಂಡರ್ 19, ಎನ್ ವೈಡಿಟಿ , ಎಂಸಿಸಿ ತಂಡದಲ್ಲಿಯೂ ಆಡಿದ್ದಾರೆ. ಇಬ್ಬರೂ ಉತ್ತಮ ಆಫ್ ಸ್ಪಿನ್ನರ್ ಕೂಡಾ ಆಗಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News