ವೈರಲ್ ವೀಡಿಯೊ: ಬೆಂಕಿ ಬಿದ್ದ ಕಾರಿನಿಂದ ತಾಯಿಯನ್ನು ರಕ್ಷಿಸಿದ ಯುವಕ

Update: 2016-11-15 13:30 GMT

ಮದೀನಾ, ನ. 15 : ಇಲ್ಲಿನ ಗ್ಯಾಸ್ ಸ್ಟೇಷನ್ ಒಂದರಲ್ಲಿ ತನ್ನ ಕಾರಿಗೆ ಇಂಧನ ತುಂಬಿಸುತ್ತಿದ್ದಾಗ ನಡೆದ ಬೆಂಕಿ ದುರಂತದಿಂದ ತನ್ನ ತಾಯಿಯನ್ನು ರಕ್ಷಿಸಿದ ಸೌದಿ ಯುವಕನ ಸಮಯ ಪ್ರಜ್ಞೆ ಹಾಗು ಸಾಹಸದ ವೀಡಿಯೊ ಈಗ ವೈರಲ್ ಆಗಿದೆ. 
ಗ್ಯಾಸ್ ಸ್ಟೇಷನ್ ಉದ್ಯೋಗಿ ಆತನ ಕಾರಿಗೆ ಗ್ಯಾಸೋಲಿನ್ ತುಂಬಿಸುತ್ತಿದ್ದ. ಹಠಾತ್ತನೆ ಕಾರಿನ ಹಿಂಬದಿ ಬೆಂಕಿ ಹಿಡಿಯಿತು. ಆ ಯುವಕ ತಕ್ಷಣ ಕಾರ್ಯಪ್ರವೃತ್ತನಾಗಿ ಕಾರಿನ ಗ್ಯಾಸ್ ಮುಚ್ಚಳವನ್ನು ತೆಗೆದು ದೂರ ಎಸೆದ. ಬಳಿಕ ತಕ್ಷಣ ಕಾರಿನ ಬಾಗಿಲು ತೆಗೆದು ತನ್ನ ತಾಯಿಯನ್ನು ಡ್ರೈವರ್ ಸೀಟಿನ ಬದಿಯಿಂದ ಹೊರ ತಂದಿದ್ದಾನೆ. ತಾಯಿ ಹೊರ ಬಂದ ಮೇಲೆ ಕಾರು ಬಹುತೇಕ ಸುಟ್ಟು ಹೋಗಿದೆ. ಈ ಸಂದರ್ಭದಲ್ಲಿ ಇನ್ನೂ ಹಲವು ಕಾರುಗಳು ಅಲ್ಲಿದ್ದವು. ಆದರೆ ಗ್ಯಾಸ್ ಸ್ಟೇಷನ್ ನ ಉದ್ಯೋಗಿಗಳು ಬೆಂಕಿ ನಂದಿಸಲು ಶ್ರಮಿಸಿದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News