ಕ್ಯಾನ್ಸರ್‌ಗೆ ಚಿನ್ನದಿಂದ ಚಿಕಿತ್ಸೆ ನೀಡಬಹುದು: ಅರಬ್ ಸಂಶೋಧಕನ ಹೇಳಿಕೆ

Update: 2016-11-16 09:22 GMT

ಜಿದ್ದ, ನ. 16: ಕ್ಯಾನ್ಸರ್‌ರೋಗವನ್ನು ಚಿನ್ನವನ್ನು ಬಳಸಿ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಲು ಸಾಧ್ಯವಿದೆ ಎಂದು ಸೌದಿ ಅರೇಬಿಯದ ಸಂಶೋಧಕ ಡಾ. ಸಈದ್ ಅಲ್ ಜರೌದಿ ಹೇಳಿದ್ದಾರೆಂದು ವರದಿಯಾಗಿದೆ. ಕ್ಯಾನ್ಸರ್ ಇದ್ದ ಇಲಿಗಳ ಮೇಲೆ ನಡೆಸಿದ ಸಂಶೋಧನೆ ಯಶಸ್ವಿಯಾಗಿದೆ ಎಂದು ಅವರು ಹೇಳುತ್ತಾರೆ.

ಅರ್ಬುಧ ಚಿಕಿತ್ಸೆಯ ಪ್ರಯುಕ್ತ ಕೀಮೊತೆರಪಿಗೆ ಉಪಯೋಗಿಸುವ ಸಿಸ್ಪ್ಲಾಟ್ ಎಂಬ ಔಷಧ ದ ಬದಲು ಚಿನ್ನ ಮಿಶ್ರಣವನ್ನು ಬಳಸಬಹುದುಎಂದು ಅವರು ಸಾಬೀತುಪಡಿಸಿದ್ದಾರೆ. ಇದು ಹೊಸ ಸಂಶೋಧನೆಯೇನಲ್ಲ .ಇದು ಇಪ್ಪತ್ತು ವರ್ಷ ಹಿಂದಿನ ಸಂಶೋಧನೆಯಾಗಿದೆ ಆದರೆ ಅದರ ಪ್ರಯೋಗದಲ್ಲಿ ಯಶಸ್ಸು ಸಿಕ್ಕಿದೆ. ಮೂರು ವರ್ಷಗಳಿಂದ ಇಲಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮೂತ್ರಪಿಂಡ ಮತ್ತು ಹೊಟ್ಟೆಯ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಿ ಗುಣಪಡಿಸಲು ಸಾಧ್ಯವೆಂದು ಡಾ. ಜರೌದಿ ಪ್ರಯೋಗದ ಮೂಲಕ ಕಂಡುಹಿಡಿದ್ದಾರೆ. ಪ್ರಯೋಗದ ಇನ್ನು ಮುಂದಿನ ಘಟಕಗಳು ಪೂರ್ತಿಯಾಗಲು ವರ್ಷವೇ ಬೇಕಿದೆ ಎಂದು ಅವರು ಒಂದು ಸ್ಥಳೀಯ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News