ಕತರ್: ಶೈಖುನಾ ತ್ವಾಕ ಉಸ್ತಾದರ ನೇತೃತ್ವದಲ್ಲಿ ದಾರುನ್ನೂರ್ ಸಮಿತಿಗೆ ಚಾಲನೆ

Update: 2016-11-21 12:20 GMT

ದೋಹಾ, ನ.21: ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡುಬಿದಿರೆ ಇದರ ಕೇಂದ್ರ ಸಮಿತಿ ಗೌರವಾಧ್ಯಕ್ಷ, ದಾರುನ್ನೂರಿನ ಶಿಲ್ಪಿ, ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿಯವರ ದೋಹಾ ಜದೀದ್‌ನಲ್ಲಿರುವ ಅಲ್ ಮಾಝಾ ಹೋಟೆಲ್ ಅಡಿಟೋರಿಯಮ್ನಲ್ಲಿ ದಾರುನ್ನೂರ್ ಎಜುಕೇಷನ್ ಸೆಂಟರ್‌ನ ನೂತನ ಸಮಿತಿಗೆ ಚಾಲನೆ ನೀಡಲಾಯಿತು.

ದಾರುನ್ನೂರ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಮಂಗಳೂರು, ದಾರುನ್ನೂರು ನೂತನ ಕಟ್ಟಡ ಸಮಿತಿ ಚೇರ್ಮೇನ್ ಅಬ್ದುಲ್ ಲತೀಫ್ ಹಾಜಿ ಮದರ್ ಇಂಡಿಯ, ದಾರುನ್ನೂರ್ ಕೇಂದ್ರ ಸಮಿತಿ ಸ್ಥಾಪಕ ಸದಸ್ಯ ನೌಶಾದ್ ಹಾಜಿ ಸೂರಲ್ಪಾಡಿ , ದಾರುನ್ನೂರ್ ಕೇಂದ್ರ ಸಮಿತಿ ಸದಸ್ಯ ಹಾಗೂ ನೂತನ ಕಟ್ಟಡ ಸಮಿತಿ ಕಾಂಟ್ರಾಕ್ಟರ್ ಮುಸ್ತಫಾ ಎಸ್.ಎಂ. ಮಂಗಳೂರು, ದಾರುನ್ನೂರು ಕೇಂದ್ರ ಸಮಿತಿ ಸದಸ್ಯ ಯುಎಇ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಹೆಂತಾರ್ ಮೊದಲಾದವರು ಆಗಮಿಸಿದ್ದರು.

ವೇದಿಕೆಯಲ್ಲಿ ಖ್ಯಾತ ಉದ್ಯಮಿ, ಅಲ್ ಉಬೈದ್ ಅಲಿ ಮೋಡ್ರನ್ ಕೋಲ್ಡ್ ಸ್ಟೋರೇಜ್ ಕತರ್ ಮತ್ತು ನಾಮ್ಕೋ ಬಿಲ್ಡರ್ಸ್ ಮಂಗಳೂರು ಇದರ ಮಾಲಕರಾದ ಮುಹಮ್ಮದ್ ಹಾಜಿ ಗಂಗೊಳ್ಳಿ ಮತ್ತು ಅಕ್ಬರ್ ಹುಸೈನ್ ಹಾಜಿ ಗಂಗೊಳ್ಳಿ, ಉಸ್ತಾದ್ ಬಶೀರ್ ಹುದವಿ ಮೂಡಿಗೆರೆ, ಹುದವಿ ಅಸೋಸಿಯೇಶನ್ ಉಪಾಧ್ಯಕ್ಷ ಉಸ್ತಾದ್ ಯೂಸುಫ್ ಹುದವಿ , ಸೌತ್ ಕೆನರಾ ಮುಸ್ಲಿಂ ಅಸೋಸಿಯೇಶನ್‌ನ ಅಧ್ಯಕ್ಷ ಶುಹೈಬ್ ಮಂಗಳೂರು , ಉದುಮ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಕೆ. ಅಬ್ದುಲ್ಲಾ ಹಾಜಿ, ಬ್ಯಾರಿ ಮತ್ತು ಕನ್ನಡ ಸಾಹಿತ್ಯ ರಂಗದ ಸಕ್ರಿಯ ಸದಸ್ಯ ಅಬ್ದುಲ್ಲಾ ಮೋನು ಮಂಗಳೂರು, ಕತರ್ ಸ್ಟೀಲ್‌ನ ಎಂಡಿ ಝಕಾರಿಯಾ ಹಾಜಿ ಮಂಗಳೂರು, ಉದ್ಯಮಿ ಯಾಸೀನ್ ಬಾವ ಬೈಂದೂರ್, ಇಬ್ರಾಹಿಂ ಹಾಜಿ ಮಂಡೆಕೋಲು, ಅಬ್ದುಲ್ ರಹೀಮ್ ಬಂದರ್, ಸೌತ್ ಕೆನರಾ ಮುಸ್ಲಿಂ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಕರಾಯ ಮೊದಲಾದವರು ಉಪಸ್ಥಿತರಿದ್ದರು.

ಶೈಖುನಾ ತ್ವಾಕಾ ಉಸ್ತಾದ್ ನೆರವೇರಿಸಿದರು. ಉಸ್ತಾದ್ ಬಶೀರ್ ಹುದವಿ ಕಿರಾಅತ್ ಪಠಿಸಿದರು.

ಯುವ ಉದ್ಯಮಿ, ಸಾಮಾಜಿಕ ಕಾರ್ಯಕರ್ತ ವಹೀದ್ ಹೈದರ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶೈಖುನಾ ತ್ವಾಕ ಉಸ್ತಾದರು ಉದ್ಘಾಟಿಸಿದರು. ಪ್ರಸಕ್ತ ಸನ್ನಿವೇಶದಲ್ಲಿ ವಿದ್ಯೆಯ ಮಹತ್ವ ಮತ್ತು ನಮ್ಮ ಮಕ್ಕಳು ದಾರಿ ತಪ್ಪುತ್ತಿರುವ ದುರದೃಷ್ಟಕರ ಸಂಗತಿಯನ್ನು ವಿವರಿಸಿದರು. ನೂರು ಕೋಟಿ ರೂ.ಖರ್ಚು ಮಾಡಿ ನಮ್ಮ ಮಕ್ಕಳ ಭವಿಷ್ಯವನ್ನು ಒಂದು ಹಂತದವರೆಗೆ ಯಶಸ್ವಿಗೊಳಿಸಲು ನಾವು ಪ್ರಯತ್ನಿಸಿದರೆ ಅದೊಂದು ಮಹಾ ಸಾಧನೆ ಮತ್ತು ದೊಡ್ಡ ಪುಣ್ಯದಾಯಕ ಕೆಲಸವಾಗಿದೆ ಎಂದು ವಿವರಿಸಿದರು.

ಬದ್ರುದ್ದೀನ್ ಹೆಂತಾರ್ ದಾರುನ್ನೂರ್‌ನ ಸಮಗ್ರ ಪರಿಚಯ ನೀಡಿದರು. ಬಳಿಕ ದಾರುನ್ನೂರ್‌ನ ಶಿಲ್ಪಿ, ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಕ ಉಸ್ತಾದರನ್ನು ಗಂಗೊಳ್ಳಿ ಸಹೋದರರಾದ ಮಹಮ್ಮದ್ ಹಾಜಿ ಮತ್ತು ಅಕ್ಬರ್ ಹುಸೈನ್ ಹಾಜಿ ಗಂಗೊಳ್ಳಿ ಶಾಲು ಹೊದಿಸಿ ಸನ್ಮಾನಿಸಿದರು.

ಬದ್ರುದ್ದೀನ್ ಹೆಂತಾರ್‌ರ ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಉಪದೇಶಕರಾಗಿ ಹಾಜಿ ಮುಹಮ್ಮದ್ ಗಂಗೊಳ್ಳಿ, ಅಬ್ದುಲ್ಲಾ ಮೋನು ಮಂಗಳೂರು, ಇಬ್ರಾಹಿಂ ಹಾಜಿ ಮಂಡೆಕೋಲು, ಝಕರಿಯಾ ಹಾಜಿ ಮಂಗಳೂರು ಕತರ್ ಸ್ಟೀಲ್ ಮೊದಲಾದವರು ಆಯ್ಕೆಯಾದರು.

ಗೌರವಾಧ್ಯಕ್ಷರಾಗಿ ಅಕ್ಬರ್ ಹುಸೈನ್ ಹಾಜಿ ಗಂಗೊಳ್ಳಿ, ಅಧ್ಯಕ್ಷರಾಗಿ ವಹೀದ್ ಹೈದರ್ ಮೂಡಿಗೆರೆ, ಉಪಾಧ್ಯಕ್ಷರಾಗಿ ಬಶೀರ್ ಹುದವಿ ಮೂಡಿಗೆರೆ, ಅಬ್ದುಲ್ ರಹೀಮ್ ಬಂದರ್, ಡಾ. ಹಾರೂನ್ ಹಾಸ್ಕೊ ಮೂಡುಬಿದಿರೆ, ಮುಬಾರಕ್ ಕುಂದಾಪುರ ಕೋಡಿ, ರಹ್ಮಾತುಲ್ಲಾ ಬಂದರ್‌ರನ್ನು ನೇಮಿಸಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ರಶೀದ್ ಅಬ್ದುಲ್ ಹಮೀದ್ ಕಕ್ಕಿಂಜೆ, ಕಾರ್ಯದರ್ಶಿಗಳಾಗಿ ಕಬೀರ್ ಮೂಡುಬಿದಿರೆ ಒಬೈದ್ ಅಲಿ ಗ್ರೂಪ್, ಇಲ್ಯಾಸ್ ಕರಾಯ, ಸಫ್ವಾನ್ ಕುಪ್ಪೆಪದವು, ಅನ್ವರ್ ತೋಡಾರ್, ಇಮ್ತಿಯಾಝ್ ಮುಲ್ಕಿ, ಕೋಶಾಧಿಕಾರಿ ಶಮೀರ್ ಫಳ್ನೀರ್, ಸಹ ಕೋಶಾಧಿಕಾರಿ – ಮುಶೀರ್ ಫಳ್ನೀರ್, ಸಂಘಟನಾ ಕಾರ್ಯದರ್ಶಿಗಳಾಗಿ ಅಬ್ದುರ್ರಝಾಕ್ ಸಾಂಬಾರ ತೋಟ, ಇಸ್ಹಾಕ್ ಮನಿಲ, ಲೆಕ್ಕ ಪರಿಶೋಧಕರಾಗಿ ಅಯೂಬ್ ಸೊರಬ, ಅಬ್ಬಾಸ್ ಮೊಹಿದ್ದೀನ್ ಪಜೀರ್ ಆಯ್ಕೆಯಾದರು.

ಕನ್ವೀನರ್‌ಗಳಾಗಿ ಶಾಹುಲ್ ಕುಪ್ಪೆಪದವು, ಶರಾಝ್ ಚೊಕ್ಕಬೆಟ್ಟು, ಸುಲೈಮಾನ್ ತೋಡಾರು, ಜಲಾಲುದ್ದೀನ್ ಕುಪ್ಪೆಪದವು, ಯಾಹ್ಯಾ ಕಾವು, ಮುಸ್ತಾಕ್ ಅಡ್ಯಾರ್ ಕಣ್ಣೂರ್, ಧಾರ್ಮಿಕ ಸಲಹೆಗಾರರಾಗಿ ಉಸ್ತಾದ್ ಆಸಿಫ್ ಹುದವಿ ಮುಂಬೈ, ಉಸ್ತಾದ್ ಇಸ್ಮಾಯೀಲ್ ಹುದವಿ ಪೆರುಂದಲ್ ಮನ್ನಾ, ತಮ್ಜೀದ್ ಹುದವಿ ಕಾಸರಗೋಡು, ಉಸ್ತಾದ್ ಸಲಾಹುದ್ದೀನ್ ಹುದವಿ ಭಿವಂಡಿಯವರನ್ನು ನೇಮಿಸಲಾಯಿತು.

ಮೀಡಿಯಾ ಕೋ ಅರ್ಡಿನೇಟರ್‌ಗಳಾಗಿ ನಾಸಿರ್ ಸಾಂಬಾರ ತೋಟ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಫಾರೂಕ್ ಬದಿಯಡ್ಕ, ಫಯಾಝ್ ತೋಡಾರ್, ಖಲಂದರ್ ತೋಡಾರ್, ಮುಬಾರಕ್ ತೋಡಾರ್, ಖಲೀಲ್ ಕುರಿಯ, ಸಿರಾಝ್ ಸಾಂಬಾರತೋಟ, ಹಾರಿಸ್ ಸಾಂಬಾರ ತೋಟ, ಹಂಝ ಪಜೀರ್, ರಿಯಾಝ್ ಅಡ್ಯಾರ್ ಕಣ್ಣೂರ್, ಸಂಶುದ್ದೀನ್ ಸಾಂಬಾರ ತೋಟ,ಮಕ್ಸೂಬ್ ಕಣ್ಣೂರ್, ನೌಫಲ್ ಉಪ್ಪಿನಂಗಡಿ, ಇಮ್ತಿಯಾಝ್ ಬೀರಿ, ನಿಝಾರ್ ಪಣಿಯೂರ್, ಅನ್ಸಾರ್ ಉಪ್ಪಿನಂಗಡಿ, ಅಶ್ರಫ್ ಬಜ್ಪೆ, ಹನೀಫ್ ಸಾಂಬಾರ ತೋಟ,ಬದ್ರುದ್ದೀನ್ ಗುರುಪುರ ಮೊದಲಾದವರು ಆಯ್ಕೆಯಾದರು.

ಶೈಖುನಾ ಖಾಝಿಯವರು ನೂತನ ಸಮಿತಿಗೆ ಶುಭಹಾರೈಸಿದರು. ನೂತನ ಸಮಿತಿಯ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಕೋಶಾಧಿಕಾರಿಯವರಿಗೆ ಅಧಿಕಾರವನ್ನು ಹಸ್ತಾಂತರಿದರು.

ಅಕ್ಬರ್ ಹುಸೈನ್ ಗಂಗೊಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ ನೂತನ ಸಮಿತಿಗೆ ಶುಭಹಾರೈಸಿದರು. ನೂತನ ಪ್ರಧಾನ ಕಾರ್ಯದರ್ಶಿ ರಶೀದ್ ಅಬ್ದುಲ್ ಹಮೀದ್ ಕಕ್ಕಿಂಜೆ ವಂದಿಸಿದರು.

ವರದಿ :ಬದ್ರುದ್ದೀನ್ ಹೆಂತಾರ್

Writer - ಬದ್ರುದ್ದೀನ್ ಹೆಂತಾರ್

contributor

Editor - ಬದ್ರುದ್ದೀನ್ ಹೆಂತಾರ್

contributor

Similar News