ದುಬೈ: ದಾರುನ್ನೂರ್ ಅಲ್ ಬರಾಹ ಶಾಖೆಯ ಪುನರ್ರಚನೆ

Update: 2016-11-22 18:17 GMT

ದುಬೈ, ನ.22: ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡುಬಿದಿರೆ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ದಾರುನ್ನೂರ್ ಕಲ್ಚರಲ್ ಸೆಂಟರ್ ಯುಎಇ ವತಿಯಿಂದ ಅಲ್ ಬರಾಹ ಶಾಖೆಯ ಪುನರ್ರಚನಾ ಕಾರ್ಯಕ್ರಮ ಫ್ರಿಜ್ ಮುರಾರ್‌ನ ಶಾಕಿರ್ ಕುಪ್ಪೆಪದವು ಅವರ ನಿವಾಸದಲ್ಲಿ ನೆರವೇರಿತು.

ದಾರುನ್ನೂರಿನ ಪ್ರಸಕ್ತ ಸನ್ನಿವೇಶವನ್ನು ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಹೆಂತಾರ್ ವಿವರಿಸಿದರು. ಮಸೀದಿ ಕಾಮಗಾರಿ ಮತ್ತು ಮುಖ್ಯ ಕಟ್ಟಡದ ಕಾಮಗಾರಿಯ ಅಭಿವೃದ್ಧಿಯನ್ನು ವಿವರಿಸುತ್ತಾ, ದಾರುನ್ನೂರ್ ನಮ್ಮ ನಿರೀಕ್ಷೆಗಿಂತಲೂ ವೇಗದಲ್ಲಿ ಮುಂದುವರಿಯುತ್ತಿದ್ದು ಅಲ್ಲಾಹು ಅನುಗ್ರಹಿಸಿದರೆ ಯೋಜನೆಗಳೂ ಸಹ ಅದೇ ರೀತಿ ಕಾರ್ಯಗತ ಗೊಳ್ಳಲಿದೆ ಎಂದರು.

ಅಲ್ ಬರಾಹ ಶಾಖೆಯ ಅಧ್ಯಕ್ಷರಾಗಿದ್ದ ಸಫ್ವಾನ್ ಕುಪ್ಪೆಪದವು ಅವರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷ ಶಾಕಿರ್ ಕುಪ್ಪೆಪದವುರವರು ಹಾಲಿ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿ ರಚನೆಗೆ ಅನುವು ಮಾಡಿಕೊಟ್ಟರು. ದಾರುನ್ನೂರ್ ಯುಎಇ ಸಂಘಟನಾ ಕಾರ್ಯದರ್ಶಿ ಹಮೀದ್ ಮನಿಲರ ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.

ಗೌರವಾಧ್ಯಕ್ಷರಾಗಿ ಉಸ್ಮಾನ್ ಕೆಮ್ಮಿಂಜೆ, ಅಧ್ಯಕ್ಷರಾಗಿ ಶಾಕಿರ್ ಕುಪ್ಪೆಪದವು, ಉಪಾಧ್ಯಕ್ಷರಾಗಿ ನಝೀರ್ ರಾಯಲ್ ಬಜ್ಪೆ, ಅಝ್ಮಲ್ ಬಜ್ಪೆ, ಅಬ್ದುಲ್ ಅಝೀಝ್ ತೊಕ್ಕೊಟ್ಟು, ಹನೀಫ್ ಎಡಪದವು, ಪ್ರಧಾನ ಕಾರ್ಯದರ್ಶಿಯಾಗಿ ರಿಝ್ವೊನ್ ಬಜ್ಪೆ, ಕಾರ್ಯದರ್ಶಿಗಳಾಗಿ ಇರ್ಫಾನ್ ಕಲ್ಲಡ್ಕ, ಅಝೀಝ್ ಬಜ್ಪೆ, ಸಿರಾಜ್ ಕುಪ್ಪೆ ಪದವು ಆಯ್ಕೆಯಾದರು.

ಕೋಶಾಧಿಕಾರಿಯಾಗಿ ಬಶೀರ್ ಕೆಮ್ಮಿಂಜೆ, ಸಂಘಟನಾ ಕಾರ್ಯದರ್ಶಿಯಾಗಿ ಇಮ್ರಾನ್ ಮಜಿಲೋಡಿ, ಕನ್ವೀನರ್‌ಗಳಾಗಿ ನೌಫಾಲ್ ಉಸ್ತಾದ್ ಉಪ್ಪಳ, ಅಫ್ಸರ್ ತೋಕೂರು, ಸಜ್ಜಾದ್ ಮೂಡುಬಿದಿರೆ, ನವೀದ್ ಕೊಂಚಾರ್, ದಾವೂದ್ ಕಾಟಿಪಳ್ಳ, ಶಾಕಿರ್ ಬಜ್ಪೆ, ನಿಯಾಝ್ ಪಾಂಡೇಶ್ವರ, ಅಶ್ರಫ್ ಬುಳ್ಳೇರಿಕಟ್ಟೆ, ಫವಾಝ್ ಮಡಂತ್ಯಾರು ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಶಿಕ್ ಬಜ್ಪೆ, ಶಂಶುದ್ದೀನ್ ಬಜ್ಪೆ, ನಝೀರ್ ಬಜ್ಪೆ, ಉಸ್ಮಾನ್ ಜೋಕಟ್ಟೆ, ಅಝ್ಮಲ್ ದೇರಳಕಟ್ಟೆ,ನೌಫಲ್ ಕಕ್ಕಿಂಜೆ, ಅಝ್ಹರ್ ಕಬಕ, ರಿಯಾಝ್ ಜೆಪ್ಪು, ನಾಸಿರ್ ಬಜ್ಪೆ, ಜಮಾಲ್ ಉಪ್ಪಿನಂಗಡಿ, ಫಹದ್ ಫರಂಗಿಪೇಟೆ, ಅರ್ಶದ್ ಪಾಂಡೇಶ್ವರ, ಫೈರೋಝ್ ಮಲಪ್ಪುರಂ, ಹಂಝ ಕೆಮ್ಮಿಂಜೆ, ಸಯೀದ್ ಕೂರ್ನಡ್ಕ, ಫಾರೂಕ್ ಕೆಮ್ಮಿಂಜೆ, ಉಮರ್ ಮಾಣಿ, ಹಫೀಝ್ ಸಂಪ್ಯ, ರಫೀಕ್ ಸಂಪ್ಯ, ಸಲೀತ್ ಕೊಡಂಗೆ, ಝಕರಿಯಾ ಮಡಿಕೇರಿ, ಶಬೀರ್ ಉಚ್ಚಿಲ, ಸಮದ್ ಕೊಲ್ಯ, ಸಲೀಂ ಪಾರಕಟ್ಟ, ಮನ್ಸೂರ್ ಪಾರಕಟ್ಟ, ಸಾಜಿದ್ ಪಾರಕಟ್ಟ, ನಾಸಿರ್ ಪಾರಕಟ್ಟ, ಅಬ್ದುಲ್ ಖಾದರ್ ಪಾರಕಟ್ಟ, ಹಂಝ ಕಾಸರಗೋಡು, ವಾಸಿಂ ಕಣ್ಣೂರ್, ಉಮ್ಮರ್ ಮೂಡುಬಿದಿರೆ ಮೊದಲಾದವರನ್ನು ಆರಿಸಲಾಯಿತು.

ಗೌರವಾಧ್ಯಕ್ಷ ಉಸ್ಮಾನ್ ಕೆಮ್ಮಿಂಜೆ, ಇಮ್ರಾನ್ ಮಜಿಲೋಡಿ, ಉಸ್ತಾದ್ ನೌಫಲ್ ಉಪ್ಪಳ, ಅಝೀಝ್ ತೊಕ್ಕೊಟ್ಟು, ಸಜ್ಜಾದ್ ಮೂಡುಬಿದಿರೆ, ಇಸ್ಮಾಯೀಲ್ ಕಲ್ಲಡ್ಕ, ರಿಯಾಝ್ ಜೆಪ್ಪು ಮೊದಲಾದವರು ಮಾತನಾಡಿ ಶುಭ ಹಾರೈಸಿದರು. ನೂತನ ಅಧ್ಯಕ್ಷ ಶಾಕಿರ್ ಕುಪ್ಪೆಪದವು ಮಾತನಾಡಿ, ಎಲ್ಲರ ಸಹಕಾರ ಕೋರಿದರು. 

ಉಸ್ಮಾನ್ ಕೆಮ್ಮಿಂಜೆ ಅಧ್ಯಕ್ಷತೆ ವಹಿಸಿದ್ದರು. ನೌಫಲ್ ಉಸ್ತಾದ್ ಉಪ್ಪಳ ದುಆ ನೆರವೇರಿಸಿದರು. ದಾರುನ್ನೂರ್ ಯುಎಇ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಅಬ್ದುಸ್ಸಲಾಂ ಬಪ್ಪಳಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಷ್ಟ್ರೀಯ ಸಮಿತಿ ಪ್ರಮುಖರಾದ ಬದ್ರುದ್ದೀನ್ ಹೆಂತಾರ್, ಅಬ್ದುಸ್ಸಲಾಂ ಬಪ್ಪಳಿಗೆ, ಹಮೀದ್ ಮನಿಲ ವೀಕ್ಷಕರಾಗಿ ಆಗಮಿಸಿದ್ದರು.ಶಾಕಿರ್ ಕುಪ್ಪೆಪದವು ಸ್ವಾಗತಿಸಿದರು. ನೂತನ ಪ್ರಧಾನ ಕಾರ್ಯದರ್ಶಿ ರಿಝ್ವಾನ್ ಬಜ್ಪೆವಂದಿಸಿದರು.

ವರದಿ: ಬದ್ರುದ್ದೀನ್ ಹೆಂತಾರ್

Writer - ಬದ್ರುದ್ದೀನ್ ಹೆಂತಾರ್

contributor

Editor - ಬದ್ರುದ್ದೀನ್ ಹೆಂತಾರ್

contributor

Similar News