ರಾಜಕೀಯ ವಿವಾಹಕ್ಕೆ ದುಬೈ ಸಿದ್ಧ
ದುಬೈ, ನವೆಂಬರ್ 29: ಇಡೀ ದುಬೈ ಒಂದು ಮದುವೆ ಮನೆಯಾಗುವ ಸಿದ್ಧತೆಯಲ್ಲಿದೆ ಎಂದು ವರದಿಯಾಗಿದೆ. ಯುಎಇ ಉಪಾಧ್ಯಕ್ಷ ಮತ್ತು ಪ್ರಧಾನಮಂತ್ರಿಹಾಗೂ ದುಬೈ ಆಡಳಿತಗಾರನಾದ ಶೇಖ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಮ್ ಪುತ್ರಿ ಶೇಖ್ ಲತೀಫಾರ ವಿವಾಹ ನಿಶ್ಚಯ ಮಂಗಳವಾರ ನಡೆಯುತ್ತಿದೆ. ರಾಸಲ್ ಖೈಮ ರಾಜಕುಟುಂಬಸದಸ್ಯರಾದ ಶೇಖ್ ಫೈಸಲ್ ಸಯೀದ್ ಅಲ್ ಖಾಸ್ಮಿ ಲತೀಫಾರನ್ನು ವರಿಸಲಿದ್ದಾರೆ. ಮದುವೆಯ ವಿಷಯವನ್ನು ಶೇಖ್ ಲತೀಫಾರೆ ತಿಳಿಸಿದ್ದಾರೆ. ಇನ್ಸ್‌ಟಾಗ್ರಾಂ, ಟ್ವಿಟರ್‌ನಲ್ಲಿ ಚಿತ್ರ ಹಾಕಿ ತಾನು ಮದುವೆಆಗಲಿರುವ ವಿಷಯವನ್ನು ಲತೀಫಾ ತಿಳಿಸಿದ್ದರು.
ಇದು ಸ್ವಲ್ಪ ಸಮಯದಲ್ಲೆ ನಾಡಿನಾದ್ಯಂತ ಹರಡಿಕೊಂಡಿದೆ. ಲತೀಫಾರ ಭಾವಿ ವರ ಮತ್ತು ಅವರ ತಂದೆ ಶೇಖ್ ಮುಹಮ್ಮದ್ ಜತೆಯಲ್ಲಿ ನಿಂತಿರುವ ಚಿತ್ರಗಳನ್ನು ಪೋಸ್ಟ್ ಮಾಡಿ ಲತೀಫಾಗೆ ಶುಭಾಶಯಗಳನ್ನು ಜನರು ತಿಳಿಸುತ್ತಿದ್ದಾರೆ.
ಲತೀಫಾ ದುಬೈ ಕಲ್ಚರ್ ಆಂಡ್ ಆರ್ಟ್ಸ್ ಅಥಾರಿಟಿ ಎಮಿರೇಟ್ ಲಿಟರೇಚರ್ ಫೌಂಡೇಶನ್‌ನ ಉಪಾಧ್ಯಕ್ಷೆಯಾಗಿದ್ದಾರೆ. ಅವರ ಭಾವಿ ವರ ಶೇಖ್ ಫೈಸಲ್ ಶಾರ್ಜ ವಿಶ್ವವಿದ್ಯಾನಿಲಯದಿಂದ ಎಂಬಿಎ ಪದವಿ ಪಡೆದಿದ್ದಾರೆ ಮತ್ತು ಇಸ್ಲಾಮಿಕ್ ಫೈನಾನ್ಸ್ ಕ್ಷೇತ್ರದಲ್ಲಿ ಪರಿಣತ ವ್ಯಕ್ತಿಯಾಗಿದ್ದಾರೆಂದು ವರದಿ ತಿಳಿಸಿದೆ.