ಕೆಸಿಎಫ್ ದಮ್ಮಾಮ್ ಸೆಕ್ಟರ್‌ಗೆ ನೂತನ ಸಾರಥ್ಯ

Update: 2016-11-30 12:39 GMT

ದಮ್ಮಾಮ್, ನ.30: ಅನಿವಾಸಿ ಕನ್ನಡಿಗರ ಸಂಘಟನೆ ಕೆಸಿಎಫ್‌ನ ದಮ್ಮಾಮ್ ಸೆಕ್ಟರ್ ಅಧೀನದಲ್ಲಿ ನಾಲ್ಕು ಹೊಸ ಯುನಿಟ್‌ಗಳನ್ನು ರಚಿಸಲಾಗಿದ್ದು, ಸೆಕ್ಟರ್‌ನ ಅರ್ಧ ವಾರ್ಷಿಕ ಕೌನ್ಸಿಲ್ ಮತ್ತು ಸಭಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸೆಕ್ಟರ್‌ನ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷ ಹಬೀಬ್ ಸಖಾಫಿ ವಹಿಸಿ ದುಆ ನೆರವೇರಿಸಿದರು, ಝೋನ್ ಅಧ್ಯಕ್ಷ ಅಝೀಝ್ ಸಅದಿ ಉದ್ಘಾಟಿಸಿದರು.

ಸೌದಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಝೋನ್ ಸಂಘಟನಾ ಕನ್ವಿನರ್ ಫಯಾಝ್ ಪಕ್ಷಿಕೆರೆ ನೇತೃತ್ವದಲ್ಲಿ ಸೆಕ್ಟರ್ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಹಬೀಬ್ ಸಖಾಫಿ ಕುತ್ತಾರು, ಪ್ರಧಾನ ಕಾರ್ಯದರ್ಶಿಯಾಗಿ ತಮೀಮ್ ಕೂಳೂರು, ಹಾಗೂ ಕೋಶಾಧಿಕಾರಿಯಾಗಿ ಬಶೀರ್ ಇಂದ್ರಾಜೆಯವರನ್ನು ಆಯ್ಕೆಮಾಡಲಾಯಿತು.

ಕೆಸಿಎಫ್ - ಐಎನ್‌ಸಿ ನಾಯಕರಾದ ಅಬೂಬಕರ್ ಪಡುಬಿದ್ರೆ ಮಾತನಾಡಿ, ಕೆಸಿಎಫ್ ಸಂಘಟನೆಯಲ್ಲಿರುವ ವಿಶೇಷತೆ ಹಾಗು ಅನಿವಾರ್ಯತೆಯನ್ನು ಕಾರ್ಯಕರ್ತರಿಗೆ ತಿಳಿಸಿದರು, ಕರ್ನಾಟಕ ಎಸ್ಸೆಸ್ಸೆಫ್ ನ ಮಾಜಿ ರಾಜ್ಯಾಧ್ಯಕ್ಷರು ಯೂಸುಫ್ ಸಅದಿ ಅಯ್ಯಂಗೇರಿ ಶುಭಾಷಯಗಳನ್ನು ಹೇಳಿದರು.

ಸೆಕ್ಟರ್ ನಿಟದ ಝೋನಲ್ ಕೌನ್ಸಿಲರ್‌ಗಳಾಗಿ ಫಾರೂಕ್ ಕುಪ್ಪೆಟ್ಟಿ,ಅದ್ನಾನ್ ಪೂಲಬೆ, ಶಫೀಕ್ ಕಾಟಿಪಳ್ಳ, ಇಕ್ಬಾಲ್ ಕೈರಂಗಳ, ಫೈಝಲ್ ಕೃಷ್ಣಾಪುರರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅಲ್ ರಬೀ ಯೂನಿಟ್ ಅಧ್ಯಕ್ಷ ಅಬೂಬಕ್ಕರ್ ಕೋಡಿ, ಟೊಯೋಟ ಯೂನಿಟ್ ಅಧ್ಯಕ್ಷ ಮುಹಮ್ಮದ್ ಸಖಾಫಿ ತಲಕ್ಕಿ ಉಪಸ್ಥಿತರಿದ್ದರು. ಅಬ್ದುಲ್ ಖಾದರ್ ಝೈನಿ ಸ್ವಾಗತಿಸಿ ನೂತನ ಪ್ರಧಾನ ಕಾರ್ಯದರ್ಶಿ ತಮೀಮ್ ಕೂಳೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News