ಜಿದ್ದ: ಬಾಲಕಿ ಅಪಘಾತದಲ್ಲಿ ಮೃತ್ಯು
Update: 2016-12-05 16:07 IST
ಜಿದ್ದ, ಡಿಸೆಂಬರ್ 5: ಕಣ್ಣೂರ್ ತಿರುವಟ್ಟೂರ್ ಎಂಬಲ್ಲಿನ ಮುಹಮ್ಮದ್ ಸಾಲಿಮ್‌ರ ಪುತ್ರಿ ಹಿಬ ಫಾತಿಮಾ(5) ಶಾಲಾ ವಾಹನ ಢಿಕ್ಕಿಯಾಗಿ ಮೃತಳಾದ ಘಟನೆ ಜಿದ್ದದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೃತ ಬಾಲಕಿ ಜಿದ್ದದ ಅಲ್ ನೂರ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಯುಕೆಜಿ ವಿದ್ಯಾರ್ಥಿನಿಯಾಗಿದ್ದಾಳೆ. ಶಾಲೆಯಿಂದ ಮನೆಗೆ ಮರಳಿ ಬಂದಿದ್ದ ಅದೇ ಬಸ್ ಹಿಬಾಳಿಗೆ ಢಿಕ್ಕಿಹೊಡೆದಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ರವಿವಾರ ಸಂಜೆ ಖಾಲಿದಿಬ್ನು ವಲೀದ್ ಎಂಬಲ್ಲಿ ಘಟನೆ ನಡೆದಿದೆ. ಮಗುವಿನ ಪಾರ್ಥಿವಶರೀರವನ್ನು ಕಿಂಗ್ ಫಹದ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಸ್ಕೂಲ್ ವಾಹನ ಚಲಾಯಿಸಿದ ಚಾಲಕನನ್ನುಪೊಲೀಸರು ಬಂಧಿಸಿದ್ದಾರೆಂದು ವರದಿ ತಿಳಿಸಿದೆ.