ಒಮನ್: ನಾಲ್ಕು ವಿಭಾಗಗಳ ವೀಸಾ ನಿಷೇಧ ಮುಂದುವರಿಕೆ

Update: 2016-12-05 12:26 GMT

ಮಸ್ಕತ್, ಡಿಸೆಂಬರ್ 5: ಒಮನ್‌ನಲ್ಲಿ ನಾಲ್ಕು ಕ್ಷೇತ್ರಗಳ ವೀಸಾಗಳಿಗೆ ಹೇರಲಾಗಿದ್ದ ನಿಷೇಧದಅವಧಿಯನ್ನು ಮುಂದುವರಿಸಲಾಗಿದೆ. ಮತ್ತು ಕಠಿಣ ನಿಯಂತ್ರಣವನ್ನು ಹೇರಲಾಗಿದೆ ಎಂದು ವರದಿಯಾಗಿದೆ. ಕಾರ್ಪಂಟರಿ ವರ್ಕ್‌ಶಾಪ್, ಅಲೂಮಿನಿಯಂ ವರ್ಕ್‌ಶಾಪ್, ಮೆಟಲ್ ವರ್ಕ್ ಶಾಪ್, ಬ್ರಿಕ್ಸ್ ಫ್ಯಾಕ್ಟರಿಗಳಿಗೆ ವೀಸಾ ನೀಡದಂತೆ ಈ ಹಿಂದೆಯೇ ನಿಷೇಧ ಹೇರಲಾಗಿತ್ತು. ಆದರೆ ಕಟ್ಟುನಿಟ್ಟಾಗಿ ಜಾರಿಗೆ ಬಂದಿರಲಿಲ್ಲ.

 2017 ಜನವರಿ ಒಂದರಿಂದ ಜುಲೈವರೆಗೆ ಈ ನಾಲ್ಕು ವಿಭಾಗಗಳಿಗೆ ವೀಸಾ ಇಲ್ಲ. ಆದರೆ ಈಗ ಈ ವಿಭಾಗದಲ್ಲಿ ದುಡಿಯುವವರಿಗೆ ಈ ನಿಯಮ ಬಾಧಕವಲ್ಲ. ಅಗತ್ಯಬಿದ್ದರೆ ಈ ನಾಲ್ಕು ತಿಂಗಳ ನಂತರ ನಿಯಂತ್ರಣವನ್ನು ತೆರವುಗೊಳಿಸುವ ಸಾಧ್ಯತೆಯೂ ಇದೆ. ಜೊತೆಗೆ ಒಂಟೆ ಪರಿಪಾಲನೆ, ಸೇಲ್ಸ್ ಪ್ರಮೋಟರ್, ಸೇಲ್ಸ್ ರೆಫ್ರೆಸೆಂಟೇಟಿವ್, ನಿರ್ಮಾಣ ಮತ್ತು ಶುಚೀಕರಣ ವಿಭಾಗಕ್ಕೆ ಈ ಹಿಂದೆಯೇ ವೀಸಾ ನಿಷೇಧಿಸಲಾಗಿದ್ದು ಅದು ಇನ್ನೂ ಮೂರು ತಿಂಗಳಿಗೆ ಮುಂದುವರಿಯಲಿದೆ. ಡಿಸೆಂಬರ್ ಒಂದರಿಂದ ಜೂನ್ ಒಂದರವರೆಗೆ ಇವುಗಳಿಗೆ ವೀಸಾ ನಿಷೇಧ ಮುಂದುವರಿಯಲಿದ್ದು,ಬಹಳ ಸಮಯದಿಂದ ಈ ವಿಭಾಗಗಳ ವೀಸಾ ನಿಷೇಧ ಮುಂದುವರಿಯುತ್ತಾ ಬಂದಿದೆ ಎಂದು ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News