×
Ad

ಮಸ್ಕತ್ ನಲ್ಲಿ ಕಾರು ಢಿಕ್ಕಿ: ಭಾರತೀಯನ ಮೃತ್ಯು

Update: 2016-12-07 14:49 IST

ಸೂರ್(ಮಸ್ಕತ್), ಡಿಸೆಂಬರ್ 7: ಒಮನ್‌ನ ಸಹಮಿನಲ್ಲಿ ಕಾರುಢಿಕ್ಕಿಯಾದ ಪರಿಣಾಮ ಒಮನ್‌ನ ಹೊಟೇಲ್ ಕಾರ್ಮಿಕನಾಗಿದ್ದ ಕೇರಳದ ವ್ಯಕ್ತಿಯೊಬ್ಬರು ಮೃತರಾಗಿದ್ದಾರೆಂದು ವರದಿಯಾಗಿದೆ.

ಮಂಗಳವಾರ ಸಹಂ ರೌಂಡ್‌ಬೌಟ್‌ನಲ್ಲಿ ರಸ್ತೆದಾಟುತ್ತಿದ್ದಾಗ ಸ್ವದೇಶಿ ವ್ಯಕ್ತಿ ಚಲಾಯಿಸುತ್ತಿದ್ದ ಕಾರಿನಡಿಗೆ ಬಿದ್ದಿದ್ದ ಚಿಟ್ಟಂಬಲ ಚೇಕುಟ್ಟಿ(64) ಎಂಬವರು ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ. ಸೊಹಾರ್ ಆಸ್ಪತ್ರೆಯಲ್ಲಿ ಅವರ ಪಾರ್ಥಿವ ಶರೀರವನ್ನು ಇರಿಸಲಾಗಿದ್ದು. ಊರಿಗೆ ತರುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸ್ವಯಂಸೇವಾ ಸಂಘಟನೆಯೊಂದರ ಕಾರ್ಯಕರ್ತ ಶಿಹಾಬ್ ಎಂಬವರು ತಿಳಿಸಿದ್ದಾರೆ. ಚೇಕುಟ್ಟಿ ಕಳೆದ ಇಪ್ಪತ್ತು ವರ್ಷಗಳಿಂದ ಹೊಟೇಲ್ ಕ್ಷೇತ್ರದಲ್ಲಿ ದುಡಿಯುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಸಹಾಮಿಯ ಖಾಸಗಿ ಸಂಸ್ಥೆಯೊಂದಕ್ಕೆ ಅಡಿಗೆಯವನಾಗಿ ಕೆಲಸಕ್ಕೆ ಸೇರಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News